ಮಂಗಳೂರು, ಆ.19 : ಡಾಬರ್ ಚವನ್ ಪ್ರಾಶ್ ಸಂಸ್ಥೆಯ ವತಿಯಿಂದ ಮಂಗಳೂರಿನ ಗಾಂಧಿ ನಗರ ಸರಕಾರಿ ಶಾಲೆ ಹಾಗೂ ಕದ್ರಿ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಡಾಬರ್ ಚವನ್ ಪ್ರಾಶ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಚವನ್ ಪ್ರಾಶ್ ಆಯುರ್ವೇದ ಉತ್ಪನ್ನವಾಗಿದ್ದು, ದಶಕಗಳಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸೋಂಕುಗಳಿಂದ ರಕ್ಷಣೆ ಹೊಂದಲು ಬಳಸಲಾಗುತ್ತಿದೆ. ಶಾಲಾ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಡಾಬರ್ ಚವನ್ ಪ್ರಾಶ್ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ಡಾಬರ್ ಚವನ್ ಪ್ರಾಶ್ ವಿತರಣೆ ಮಾಡಲಾಗುತ್ತಿದೆ ಎಂದು ಡಾ. ರುಚಿ ಅವರು ಹೇಳಿದರು.
ಸಂಸ್ಥೆಯ ಪ್ರಶಾಂತ್ ಅಗರವಾಲ್ ಅವರು ಮಾತನಾಡಿ, ಆಯುರ್ವೇದದ ಶ್ರೀಮಂತ ಪರಂಪರೆ ಮತ್ತು ಪ್ರಕೃತಿ ಗಾಢ ಜ್ಞಾನ ಹೊಂದಿರುವ ಡಾಬರ್ ಯಾವಾಗಲೂ ಸುರಕ್ಷಿತ, ಕೈಗೆಟಕುವ ದರದಲ್ಲಿ ಲಭ್ಯವಿದೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಸಮಂತ್, ಗಾಂಧಿ ನಗರ ಶಾಲೆಯ ಮುಖ್ಯ ಶಿಕ್ಷಕಿ, ಶಿಕ್ಷಕಿಯರು ಹಾಗೂ ಡಾಬರ್ ಇಂಡಿಯಾದ ದಿನೇಶ್ ಕುಮಾರ್ ಇದ್ದರು.