ಮಂಗಳೂರು,ಆ.20 : ವಿದ್ಯಾರ್ಥಿಗಳ ಆಕಾಂಕ್ಷೆಗಳನ್ನು ಸಾಧನೆಗಳಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಪರೀಕ್ಷಾ ಪೂರ್ವಸಿದ್ಧತಾ ಸೇವೆಗಳಲ್ಲಿ ಮುಂಚೂಣಿಯಲ್ಲಿರುವ ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ (ಎಇಎಸ್ಎಲ್), ತನ್ನ ಪ್ರಮುಖ ಉಪಕ್ರಮ – ಅಂಥೆ- 2025 (ಆಕಾಶ್ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ) ಆಯೋಜಿಸಿದೆ ಎಂದು ಎಇಎಸ್ಎಲ್ ಸಿಇಒ ಮತ್ತು ಆಡಳಿತ ನಿರ್ದೇಶಕ ದೀಪಕ್ ಮೆಹೋತ್ರಾ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು, ಆ.24, 31, ಸೆ.7ರಂದು ರಾಷ್ಟ್ರೀಯ ಮಟ್ಟದ ಅರ್ಹತಾ ವಿದ್ಯಾರ್ಥಿವೇತನ ಪರೀಕ್ಷೆ ನಡೆಯಲಿದೆ. ಪರೀಕ್ಷೆಯನ್ನು ಆನ್ಲೈನ್ ಮತ್ತು ಆಫ್ಲೈನ್ ವಿಧಾನದಲ್ಲಿ ಬರೆಯಲು ಅವಕಾಶವಿದೆ. ಆಯ್ದ ವಿದ್ಯಾರ್ಥಿಗಳಿಗೆ ಶೇ.100ರವರೆಗೆ ವಿದ್ಯಾರ್ಥಿವೇತನ ಮತ್ತು ನಗದು ಬಹುಮಾನ ನೀಡಲಾಗುತ್ತದೆ. ಆಕಾಶ್ ಎಜುಕೇಷನಲ್ ಸರ್ವೀಸಸ್ ತನ್ನ ಡಿಜಿಟಲ್ ಮತ್ತು ಇನ್ವೆಸ್ಟಸ್ ಕೋಸ್ ೯ಗಳಿಗೆ ದೇಶಾದ್ಯಂತ 250 ಕೋಟಿ ರೂ. ಮೌಲ್ಯದ ಶೇ.100 ವಿದ್ಯಾರ್ಥಿವೇತನ ನೀಡುತ್ತದೆ. ಜತೆಗೆ ರೂ. 2.5 ಕೋಟಿ ಮೌಲ್ಯದ ಪ್ರಶಸ್ತಿ ನೀಡಲಾಗುವುದು ಎಂದರು.
ಈ ವರ್ಷದಿಂದ ಪ್ರತಿಷ್ಟಿತ ಆಕಾಶ್ ಇನ್ವೆಸ್ಟಸ್ ಕೋರ್ಸ್ ಅಡ್ವಾನ್ಸ್ಡ್ ಜೆಇಇ ತಯಾರಿಗಾಗಿ ವಿದ್ಯಾರ್ಥಿವೇತನ ಮತ್ತು ಪ್ರವೇಶಕ್ಕಾಗಿ ಇನ್ವೆಸ್ಟಸ್ ಏಸ್ ಪರೀಕ್ಷೆ ಆರಂಭಿಸಲಾಗುತ್ತಿದೆ. ನೀಟ್ನಲ್ಲಿ ಈ ವರ್ಷ ಟಾಪ್ 100ರಲ್ಲಿ 22 ಮಂದಿ ಮತ್ತು ಜೆಇಇ ಅಡ್ವಾನ್ಸ್ಡ್ 2025ರಲ್ಲಿ ಟಾಪ್ 100ರಲ್ಲಿ 10 ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ ಎಂದರು.
ಅ೦ಥೆಗೆ ಆನ್ಲೈನ್ ನೋಂದಣಿ ಆರಂಭವಾಗಿದ್ದು, ಸಂಸ್ಥೆಯ ವೆಬ್ಸೈಟ್ನಲ್ಲಿ ಆನ್ ಲೈನ್ನಲ್ಲಿ ನೋಂದಾಯಿಸಿಕೊಳ್ಳಬಹುದು ಅಥವಾ ಹತ್ತಿರದ ಆಕಾಶ್ ಕೇಂದ್ರಕ್ಕೆ ಭೇಟಿ ನೀಡಬಹುದು. ಅಂಥೆ 2025ರ ಫಲಿತಾಂಶಗಳನ್ನು ಹಂತ ಹಂತವಾಗಿ ಪ್ರಕಟಿಸಲಾಗುವುದು. ಎಲ್ಲ ಫಲಿತಾಂಶ ಗಳು ಅಧಿಕೃತ ಅಂಥೆ ವೆಬ್ಸೈಟ್ನಲ್ಲಿ ಲಭ್ಯವಿರಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಾರ್ವಜನಿಕ ಸಂಪರ್ಕ ವಿಭಾಗ ಮುಖ್ಯಸ್ಥ ವರುಣ್ ಸೋನಿ, ಸೂರಜ್ ಪ್ರಭು, ಮಂಗಳೂರು ಕೇಂದ್ರದ ಮುಖ್ಯಸ್ಥ ಶ್ಯಾಮ್ ಪ್ರಸಾದ್ ಉಪಸ್ಥಿತರಿದ್ದರು.