ಮಂಗಳೂರು, ಆ. 24 : ನವಮಂಗಳೂರು ಬಂದರು ಪ್ರಾಧಿಕಾರದ (ಎನ್ಎಂಪಿಎ) ಸುವರ್ಣ ಸಂಭ್ರಮದ ಪ್ರಯುಕ್ತ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ‘ಆರೋಗ್ಯ, ಕ್ರಿಯಾಶೀಲ ಜೀವನಶೈಲಿ, ದೈಹಿಕ ಕ್ಷಮತೆ’ ಧೈಯದೊಂದಿಗೆ ಆಗಸ್ಟ್31ರಂದು ಬೆಳಗ್ಗೆ 6 ರಿಂದ 9ಗಂಟೆಯವರೆಗೆ 10 ಕಿ.ಮೀ., 5 ಕಿ.ಮೀ. ಮತ್ತು 3 ಕಿ.ಮೀ. ಓಟ ಆಯೋಜಿಸಲಾಗಿದೆ ಎಂದು ಎನ್ಎಂಪಿಎಯ ಹಿರಿಯ ಉಪ ಕಾರ್ಯದರ್ಶಿ ಕೃಷ್ಣ ಬಾಪಿ ರಾಜು ಅವರು ಶನಿವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ..
ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು, ಈ ಓಟ ಮಂಗಳೂರು ಪಣಂಬೂರು ಬೀಚ್ ನಿಂದ ತಣ್ಣೀರುಬಾವಿ ಬೀಚ್ವರೆಗೆ ನಡೆಯಲಿದ್ದು ಈಗಾಗಲೇ ಕರ್ನಾಟಕ ಹಾಗೂ ನೆರೆ ರಾಜ್ಯಗಳಿಂದ 3,000ಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.ವಿವಿಧ ವಯೋಮಿತಿ ವಿಭಾಗದಲ್ಲಿ ಓಟ ನಡೆಯಲಿದೆ. 10 ಕಿ.ಮೀ. ಮತ್ತು 5 ಕಿ.ಮೀ ಓಟಕ್ಕೆ ನಿಗದಿತ ಸಮಯವಿರುತ್ತದೆ. 3 ಕಿ.ಮೀ. ಓಟ ‘ಫನ್ ರನ್ ಆಗಿರುತ್ತದೆ. 10 ಕಿ.ಮೀ. ಓಟವು ಮುಂದೆ ದೇಶದಲ್ಲಿ ನಡೆಯುವ ಮ್ಯಾರಥಾನ್ಗೆ ಅರ್ಹತ ಓಟವೂ ಆಗಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ರೀಡಾ ವಿಭಾಗದ ಸೌರವ್ ಘೋಷ್ ಉಪಸ್ಥಿತರಿದ್ದರು.