ಸುಳ್ಯ, ಸೆ. 15 : ತೆಂಗಿನ ಮರದಿಂದ ಕಾಯಿಯನ್ನು ಕೀಳುತ್ತಿದ್ದಾಗ ಅಲ್ಯೂಮೀನಿಯಂ ದೋಟಿ ವಿದ್ಯುತ್ ಲೈನಿಗೆ ತಾಗಿ ಶಾಕ್ ಹೊಡೆದು ಕಾಯಿ ಕೊಯ್ಯುತ್ತಿದ್ದ ವ್ಯಕ್ತಿ ಸಾವನಪ್ಪಿದ ಘಟನೆ ಬೆಳ್ಳಾರೆ ಬಳಿಯ ಅಯ್ಯನಕಟ್ಟೆಯಲ್ಲಿ ಸೋಮವಾರ ನಡೆದಿದೆ.
ಮೃತರನ್ನು ತಂಬಿನಮಕ್ಕಿಯ ರಾಮ ಎಂದು ಗುರುತಿಸಲಾಗಿದೆ.
ಅಯ್ಯನಕಟ್ಟೆಯ ಗೋಕುಲಂ ಎದುರುಗಡೆ ಇರುವ ಸಿದ್ದಿಕ್ ಎಂಬರಿಗೆ ಸೇರಿದ ತೆಂಗಿನ ಮರದಿಂದ ಕಾಯಿ ಕೀಳುತ್ತಿದ್ದಾಗ ಅಲ್ಯೂಮೀನಿಯಂ ದೋಟಿ ತೋಟದ ಬದಿಯಲ್ಲಿ ಹಾದು ಹೋಗಿರುವ ಎಚ್.ಟಿ. ಲೈನ್ಗೆೆ ತಾಗಿ ದೋಟಿಯ ಮೂಲಕ ವಿದ್ಯುತ್ ಹರಿದು ರಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.