ಮಂಜೇಶ್ವರ,ಡಿ.22 : ಇಲ್ಲಿನ ಸ್ನೇಹಾಲಯ ಮನೋ-ಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ “ಕ್ರಿಸ್ಮಸ್ ಸಂಭ್ರಮ – 2025” ಕಾರ್ಯಕ್ರಮ ಭಕ್ತಿಭಾವ ಮತ್ತು ಹಬ್ಬದ ಉಲ್ಲಾಸದೊಂದಿಗೆ ಆಚರಿಸಲಾಯಿತು.
ಅತೀ ವಂದನೀಯ ಬಿಷಪ್ ಹೇಮಚಂದ್ರ ಕುಮಾರ್, ಒಫ಼್ ಚರ್ಚ್ ಒಫ಼್ ಸೌತ್ ಇಂಡಿಯಾ ಇವರು ಮುಖ್ಯ ಅತಿಥಿಯಾಗಿ ಆಗಮಿಸಿ, ಆಚರಣೆಗೆ ಮುನ್ನ ಕ್ಯಾಂಪಸ್‌ಗೆ ಭೇಟಿ ನೀಡಿದರು, ಅವರು ನಿವಾಸಿಗಳನ್ನು ಆಶೀರ್ವದಿಸಿದರು ಮತ್ತು ಪ್ರೀತಿ, ಕರುಣೆ ಮತ್ತು ಮಾನವೀಯ ಕಾರ್ಯಗಳ ಅದ್ಭುತ ಸಂದೇಶವನ್ನು ನೀಡಿದರು.
ಸಾನಿಧ್ಯ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ವಸಂತ್ ಶೆಟ್ಟಿ ಅತಿಥಿಯಾಗಿ ಉಪಸ್ಥಿತಿ ಇದ್ದು, ಕ್ರಿಸ್ತ ಮತ್ತು ಕೃಷ್ಣರನ್ನು ಹೋಲಿಸುವ ಸಂದೇಶ ಹೊಂದಿರುವ ಮಾತುಗಳನ್ನು ಆಡಿದರು.ಬ್ರದರ್ ಜೋಸೆಫ್ ಕ್ರಾಸ್ತಾ ಅವರ ಸೇವೆ ಶ್ಲಾಘ ನೀಯ ಎಂದರು.
ದೆಹಲಿಯ ಫಾರ್ಚೂನ್ ಲೈಫ್ ವೆಲ್ತ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕ ಮತ್ತು ಬಾಂಬೆಯ ಪಿಟಿಐ ಕನ್ಸಲ್ಟೆನ್ಸಿಯ ಮಾಲೀಕರು ಜೋಸೆಫ್ ಎಲಿಯಾಸ್ ಮಿನೆಜಸ್, ಅವರು ತಮ್ಮ ಕಾವ್ಯಾತ್ಮಕ ಶೈಲಿಯಲ್ಲಿ ತಮ್ಮ ಅನುಭವ ಹಾಗೂ ಭಾವನೆಗಳನ್ನು ಹಂಚಿಕೊಂಡರು.
ನೂತನವಾಗಿ ಆಯ್ಕೆಯಾದ ಕಾಸರಗೋಡು ಜಿಲ್ಲಾ ಪಂಚಾಯತ ಸದಸ್ಯರಾದ ಹರ್ಷದ್ ವೋರ್ಕಾಡಿ ಅಂದೇ ಪ್ರಮಾಣ ವಚನ ಮತ್ತು ಅಧಿಕಾರ ಸ್ವೀಕಾರ ಮಾಡಿ ಸಂಭ್ರಮದಲ್ಲಿ ಪಾಲ್ಗೊಂಡು ಜೋಸೆಫ್ ಹಾಗೂ ಅವರ ಮಿಷನ್ನ ಹಳೆಯ ದಿನಗಳನ್ನು ಅವರು ನೆನಪಿಸಿಕೊಂಡರು ಮತ್ತು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಕಾರ್ಯಕ್ರದಲ್ಲಿ ಕರ್ನಾಟಕ ಕೊಂಕಣಿ ಬಾಷಾ ಮಂಡಲದ ಅಧ್ಯಕ್ಷರು ಮತ್ತು ಪಿಂಗಾರ ಪತ್ರಿಕೆಯ ಸ್ಥಾಪಕರು, ಸಂಪಾದಕರೂ ಆದ ರೇಮಂಡ್ ಡಿ ಕುನ್ಹಾ ತಾಕೋಡೆ, ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯ ಸಂಯೋಜಿತ ನಿರ್ದೇಶಕ ರೆವರೆಂಡ್ ಫಾದರ್ ವಿನ್ಸೆಂಟ್ ಕ್ರಾಸ್ತಾ, ಸ್ನೇಹಾಲಯದ ರೆವರೆಂಡ್ ಫಾದರ್ ಸಿರಿಲ್ ಡಿ ಸೋಜಾ, ಈಶ್ವರ್ ಮಲ್ಪೆ ಮತ್ತಿತರರು ಉಪಸ್ಥಿತರಿದ್ದರು.
ಬ್ರದರ್ ಜೋಸೆಫ್ ಕ್ರಾಸ್ತಾ ಅವರು ಪ್ರಸ್ತಾವಿಕವಾಗಿ ಮಾತಾಡಿ ಅತಿಥಿಗಳನ್ನುಸ್ವಾಗತಿಸಿದರು. ಒಲಿವಿಯಾ ಕ್ರಾಸ್ತಾ ಧನ್ಯವಾದಗಳನ್ನು ಅರ್ಪಿಸಿದರು.ಜಿಯೋ ಡಿ’ಸಿಲ್ವಾ ಅವರು ಕಾರ್ಯಕ್ರಮವನ್ನು ನಿರ್ವಹಿಸಿ ಮತ್ತು ನಿರೂಪಿಸಿದರು.











