ಮಂಗಳೂರು,ಜ. 06 : ಬಾಲ ಯೇಸುವಿನ ವಾರ್ಷಿಕ ಮಹೋತ್ಸವಕ್ಕೆ ಸಿದ್ಧತೆಯಾಗಿ ಜ.3, ಶನಿವಾರ ಕೊರ್ಡೆಲ್ ಚರ್ಚ್ ನಿಂದ ಬಿಕರ್ನಕಟ್ಟೆ ಬಾಲ ಯೇಸುವಿನ ಪುಣ್ಯಕ್ಷೇತ್ರದ ವರೆಗೆ ಭಕ್ತಿಭಾವಪೂರ್ಣ ಹೊರೆ ಕಾಣಿಕೆ ಮೆರವಣಿಗೆ ನಡೆಯಿತು.
ಅನೇಕ ಭಕ್ತರು ಕೃತಜ್ಞತೆ, ನಂಬಿಕೆ ಮತ್ತು ಆಶಯದೊಂದಿಗೆ ಕಾಣಿಕೆಗಳನ್ನು ಸಮರ್ಪಿಸಿದರು. ಕೊರ್ಡೆಲ್ ಚರ್ಚ್ ನ ಸಹಾಯಕ ಧರ್ಮಗುರು ವಂ. ವಿಜಯ್ ಮೊಂತೆರೋ ಅವರು ಆಶೀರ್ವಾದ ನೀಡಿದರು. ಕೊರ್ಡೆಲ್ ಚರ್ಚ್ ನ ಉಪಾಧ್ಯಕ್ಷೆ ರೂತ್ ಕ್ಯಾಸ್ಟೆಲಿನೊ ಅವರು ಮೆರವಣಿಗೆಗೆ ಧ್ವಜ ಹಾರಿಸಿ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಸಾಮಾಜಿಕ ಸೌಹಾರ್ದತೆ ಯನ್ನು ಉತ್ತೇಜಿಸುವ “ಸಹಬಾಳ್ವೆ” ಕಾರ್ಯಕ್ರಮ ಪುಣ್ಯಕ್ಷೇತ್ರದ ಆಂಗಣದಲ್ಲಿ ನಡೆಯಿತು. ಸಾಮಾಜಿಕ ಕಾರ್ಯಕರ್ತ ಮುನೀರ್ ಕಾಟಿಪಳ್ಳ , ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಶಾಲೇಟ್ ಪಿಂಟೊ ಹಾಗೂ ಮಾನವ ಹಕ್ಕುಗಳ ಹೋರಾಟಗಾರ, ವಕೀಲರು ದಿನೇಶ್ ಹೆಗಡೆ, ಉಳೇಪಾಡಿ ಭಾಗವಹಿಸಿದರು. ಸಮಾಜದಲ್ಲಿ ಸಹೋದರತ್ವ ಮತ್ತು ಏಕತೆಯ ಮಹತ್ವವನ್ನು ಅವರು ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ಸಂತ ಅಲೋಶಿಯಸ್ ವಿಶ್ವ ವಿದ್ಯಾನಿಲಯ ಉಪಕುಲಪತಿ ವಂ. ಪ್ರವೀಣ್ ಮಾರ್ಟಿಸ್, ಕುಲಶೇಖರ ಸಾಂತಾ ಕ್ರೂಸ್ ಕಾನ್ವೆಂಟ್ ಇಲ್ಲಿನ ಸಿಸ್ಟರ್ ರೀನಾ ಡಿಸೋಜಾ, ಹಾಗೂ ಕಾರ್ಪೊರೇಟರ್ ಗಳಾದ ಕೇಶವ್ ಮತ್ತು ನವೀನ್ ಉಪಸ್ಥಿತರಿದ್ದರು. ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಭಾಗವಹಿಸಿದವರನ್ನು ಗೌರವಿಸಲಾಯಿತು. ಸಂತ ಜೋಸೆಫ್ ಮಠದ ಮಠಾಧೀಶರು ವಂ. ಮೆಲ್ವಿನ್ ಡಿ’ಕುನ್ನಾ ಮತ್ತು ಪುಣ್ಯಕ್ಷೇತ್ರದ ನಿರ್ದೇಶಕರು ವಂ. ಸ್ಟೀಫನ್ ಪಿರೇರಾ ಭಕ್ತರಿಗೆ ಕೃತಜ್ಞತೆ ಸಲ್ಲಿಸಿ ಪ್ರಾರ್ಥನೆಯ ಭರವಸೆ ನೀಡಿದರು.
ಅಂತಿಮವಾಗಿ ವಂ. ಪ್ರವೀಣ್ ಮಾರ್ಟಿಸ್ ಧ್ವಜಕ್ಕೆ ಆಶೀರ್ವಾದ ನೀಡಿ ಧ್ವಜಾರೋಹಣ ಮಾಡುವ ಮೂಲಕ ನವೆನಾ ಮತ್ತು ಮಹೋತ್ಸವವನ್ನು ಅಧಿಕೃತವಾಗಿ ಉದ್ಘಾಟಿಸಿದರು.
ಈ ವರ್ಷದ ಮಹೋತ್ಸವದ ಧ್ಯಾನದ ವಿಷಯ “ ಕರೆದಿಹರು ಕಾರ್ಮೆಲ್ ಗಿರಿಗೆ, ಕುರಿಮರಿಯ ಲಗ್ನ ಉತ್ಸವಕೆ” ಎಂಬುದಾಗಿದ್ದು, ಶಿಲುಬೆಯ ಸಂತ ಯೊವಾನ್ನರ ಉಪದೇಶಗಳಿಂದ ಪ್ರೇರಿತವಾಗಿದೆ. ಅವರ ಸಂತತ್ವದ 300ನೇ ರ್ಷತ ಮತ್ತು ಪವಿತ್ರ ರ್ಮಯಸಭೆಯ ಪಂಡಿತರೆಂದು ಘೋಷಿಸಲಾದ 100ನೇ ರ್ಷದದ ಸ್ಮರಣೆಯೂ ಈ ವರ್ಷ ಆಚರಿಸಲಾಗುತ್ತಿದೆ.
ಜನವರಿ 5 ರಿಂದ 13ರವರೆಗೆ ದಿನವಿಡೀ ನವೆನಾವಿಧಿಗಳು, 9 ಪೂಜಾಕರ್ಯ್ಗಳು ಹಾಗೂ ಪವಿತ್ರ ಸಂಸ್ಕಾರದ ಆರಾಧನೆ ನಡೆಯಲಿದ್ದು, ವರ್ಷದ ಜಾತ್ರೆ ಜನವರಿ 14 ಮತ್ತು 15, 2026ರಂದು ನಡೆಯಲಿದೆ.











