ಮಂಗಳೂರು, ಮೇ 6: ಮೂಡುಬಿದಿರೆಯ ಟೀಮ್ ಡೈನಾಮಿಕ್ಸ್ ರೇಸಿಂಗ್ ವತಿಯಿಂದ ಡರ್ಟ್ ಫೆಸ್ಟ್ 2026 ಮೇ 10ರಂದು ಮೂಡುಬಿದಿರೆಯ ಸ್ವರಾಜ್ ಮೈದಾನದ ಫಾರ್ಚೂನ್ ಮೈದಾನದಲ್ಲಿ ನಡೆಯಲಿದೆ ಎಂದು ಕೆಟಿಸಿ ನಝೀರ್ ಅವರು ಬುಧವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ 4ನೇ ವರ್ಷದ ಸ್ಪರ್ಧೆ ನಡೆಯದ್ದು ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ ಮತ್ತು ಗೋವಾದಿಂದ ಸುಮಾರು 60ರಿಂದ 100 ಕಾರುಗಳು ಭಾಗವಹಿಸಲಿವೆ ಎಂದರು.
ಪ್ರವೇಶ ಶುಲ್ಕ 2,500 ರೂ. ಇರಲಿದೆ. ವಿಜೇತರಿಗೆ ನಗದು ಹಾಗೂ ಟ್ರೋಫಿಗಳನ್ನು ನೀಡಲಾಗುತ್ತದೆ. ಫುಡ್ ಸ್ಟಾಲ್ ಗಳು,ಮನೋರಂಜನೆಯ ಕಾರ್ಯಕ್ರಮಗಳು ಸೇರಿದಂತೆ ಹಲವು ವಿಶೇಷತೆಗಳು ಇರಲಿವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಹಮ್ಮದ್ ತಲ್ಲ ಉಪಸ್ಥಿತರಿದ್ದರು.











