ಉಪ್ಪಿನಂಗಡಿ, ಮೇ. 10 : ರಸ್ತೆ ಕಾಮಗಾರಿಯ ವೇಳೆ ರೋಡ್ ರೋಲರ್ನ ಅಡಿಗೆ ಬಿದ್ದು ಕಾರ್ಮಿಕನೋರ್ವ ಮೃತಪಟ್ಟ ಘಟನೆ ಮೇ 9, ಶನಿವಾರ ಉಪ್ಪಿನಂಗಡಿಯ ಗಾಂಧಿಪಾರ್ಕ್ ಬಳಿ ನಡೆದಿದೆ.
ಮೃತರನ್ನು ಬಿಹಾರ ಮೂಲದ ರಾಮಚಂದ್ರ ಶಿಕಾರಿ (55) ಎಂದು ಗುರುತಿಸಲಾಗಿದೆ.
ಗಾಂಧಿಪಾರ್ಕ್ ಬಳಿ ಚತುಷ್ಪಥ ರಾಷ್ಟ್ರೀಯ ಕಾಮಗಾರಿಯ ಹಿನ್ನೆಲೆಯಲ್ಲಿ ಸರ್ವೀಸ್ ರಸ್ತೆಯ ಕಾಮಗಾರಿ ನಡೆಯುತ್ತಿದ್ದು, ಈ ವೇಳೆ ವ್ಯಕ್ತಿಯೋರ್ವ ರಸ್ತೆ ಬದಿ ಮಲಗಿದ್ದ, ಅವರು ಮಲಗಿರುವುದು ಅರಿವಿಗೆ ಬಾರದೆ ಆತನ ಮೇಲೆ ರೋಡ್ ರೋಲರ್ ಚಲಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











