ಮಂಗಳೂರು, ಮೇ 14: ಮಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ‘ಲ್ಯಾನ್ಸಿ ಕನ್‌ಸ್ಟ್ರಕ್ಷನ್ಸ್’ ಸಂಸ್ಥೆಯ ಸ್ಥಾಪಕ ಲ್ಯಾನ್ಸಿ ಜೋಸೆಫ್ ಮಸ್ಕರೇನಸ್ (77) ಅವರು ಮೇ. 13,ಬುಧವಾರ ನಿಧನರಾದರು.
1982 ರಲ್ಲಿ ಹಂಪನಕಟ್ಟೆಯ ‘ಧನ್ಯವಾದ್’ , 1984 ರಲ್ಲಿ ‘ಪಾಂಪೆ ಶೇಡ್ ಅಪಾರ್ಟ್ಮೆಂಟ್’ ನಿರ್ಮಿಸಿದ್ದರು. ಹಾಗೆನೇ ಅವರು ಎಲ್ಜೆನ್ ಪ್ರಮೋಟರ್ಸ್, ನಿಶಾಲ್ ಅಸೋಸಿಯೇಟ್ಸ್ ಸಂಸ್ಥೆಗಳನ್ನು ಹೊಂದಿದ್ದರು
ಬಜ್ಪೆ ಚರ್ಚ್, ಬಿಕರ್ನಕಟ್ಟೆಯ ಇನ್ಫೆಂಟ್ ಜೀಸಸ್ ಚರ್ಚ್ ಸೇರಿದಂತೆ 25ಕ್ಕೂ ಹೆಚ್ಚು ಚರ್ಚ್‌ಗಳು, 4 ಮಸೀದಿಗಳು ಮತ್ತು 3 ದೇವಾಲಯಗಳನ್ನು ನಿರ್ಮಿಸಿ ದ್ದಾರೆ. ಹಾಗೆನೇ ಸಂಘ ನಿಕೇತನದ ಬಹುಮಹಡಿ ಸಭಾಂಗಣ ಸಂಕೀರ್ಣವನ್ನು ನಿರ್ಮಿಸಿದ್ದರು.
ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು, ಸೈಂಟ್ ಅಲೋಶಿಯಸ್ ಕಾಲೇಜಿನ ಆಡಳಿತ ಮಂಡಳಿ ಬ್ಲಾಕ್ ಮತ್ತು ಯುನಿಟಿ ಹೆಲ್ತ್ ಕಾಂಪ್ಲೆಕ್ಸ್ನ ನರ್ಸಿಂಗ್ ಸ್ಕೂಲ್ ಇವರ ಸಂಸ್ಥೆಯ ಮೂಲಕ ನಿರ್ಮಾಣಗೊಂಡಿದೆ.
ಲ್ಯಾನ್ಸಿ ಜೋಸೆಫ್ ಮಸ್ಕರೇನಸ್ ಅವರ ಉದ್ಯಮಶೀಲತೆ ಮತ್ತು ವೃತ್ತಿಪರತೆಯನ್ನು ಗುರುತಿಸಿ 2006 ರಲ್ಲಿ ‘ರಚನಾ ವರ್ಷದ ಉದ್ಯಮಿ’ ಪ್ರಶಸ್ತಿ, 2012 ರಲ್ಲಿ ‘ಎಫ್‌ಕೆಸಿಎ ವೃತ್ತಿಪರ ಶ್ರೇಷ್ಠತಾ ಪ್ರಶಸ್ತಿ’ ನೀಡಿ ಗೌರವಿಸಲಾಗಿತ್ತು.











