ಕಾಪು,ಮೇ. 19 : ಸ್ಕೂಟರ್ ವಾಹನವು ನೀರಿನ ಟ್ಯಾಂಕರ್ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಾಪು ಪಣಿಯೂರ್ನಲ್ಲಿ ನಡೆದಿದೆ.
ಮೃತರನ್ನು ಪಣಿಯೂರು ಕೇಂದ್ರದ ನಿವಾಸಿ ಕೃಷ್ಣ ಮೂಲ್ಯ (22) ಎಂದು ಗುರುತಿಸಲಾಗಿದೆ.
ಕೃಷ್ಣ ಮೂಲ್ಯ ಹಾಲು ಖರೀದಿಸಲು ತನ್ನ ಸ್ಕೂಟರ್ನಲ್ಲಿ ಹೋಗಿ ಮರಳಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಎದುರಿನಿಂದ ಚಲಿಸುತ್ತಿದ್ದ ನೀರಿನ ಟ್ಯಾಂಕರ್ ಕಂಚುಗರ ರಸ್ತೆಗೆ ಪ್ರವೇಶಿಸಲು ಬಲಕ್ಕೆ ತಿರುಗಿದಾಗ ಸ್ಕೂಟರ್ ಅದಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಸವಾರ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರು. ಆದರೆ, ಅವರು ಅದಾಗಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











