Close Menu
Navaloka Media News Mangalore| Kannada Online News PortalNavaloka Media News Mangalore| Kannada Online News Portal
    Our Picks

    ಅಡಿಕೆ ಹಾಳೆ ತಟ್ಟೆಗಳಲ್ಲಿ ಅರೆಕೋಲಿನ್ ಪ್ರಮಾಣ ಅತ್ಯಂತ ಕಡಿಮೆ – ಅಗ್ರಿ ಲೀಫ್ ಸಹ ಸಂಸ್ಥಾಪಕ ಅವಿನಾಶ್ ರಾವ್

    September 12, 2026

    ಮಂಗಳೂರು : ಕೆಎಂಸಿಯಲ್ಲಿ 70ನೇ ವರ್ಷದ ಗಣೇಶ ಚತುರ್ಥಿ ಸಂಭ್ರಮ

    September 11, 2026

    ಮಂಗಳೂರು: ಕ್ಯಾಂಪ್ಕೊ ದಾಖಲೆಯ ಸಾಧನೆ ; ₹3,735 ಕೋಟಿ ವಹಿವಾಟು, ₹49.62 ಕೋಟಿ ಲಾಭ

    September 10, 2026

    Subscribe to Updates

    Get the latest creative news from FooBar about art, design and business.

    What's Hot

    ಅಡಿಕೆ ಹಾಳೆ ತಟ್ಟೆಗಳಲ್ಲಿ ಅರೆಕೋಲಿನ್ ಪ್ರಮಾಣ ಅತ್ಯಂತ ಕಡಿಮೆ – ಅಗ್ರಿ ಲೀಫ್ ಸಹ ಸಂಸ್ಥಾಪಕ ಅವಿನಾಶ್ ರಾವ್

    September 12, 2026

    ಮಂಗಳೂರು : ಕೆಎಂಸಿಯಲ್ಲಿ 70ನೇ ವರ್ಷದ ಗಣೇಶ ಚತುರ್ಥಿ ಸಂಭ್ರಮ

    September 11, 2026

    ಮಂಗಳೂರು: ಕ್ಯಾಂಪ್ಕೊ ದಾಖಲೆಯ ಸಾಧನೆ ; ₹3,735 ಕೋಟಿ ವಹಿವಾಟು, ₹49.62 ಕೋಟಿ ಲಾಭ

    September 10, 2026
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    • Home
    • Local News
    • State News
    • National/International news
    • Film News
    • Contact Us
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    Home»Local News»ಮೇ 23 ರಂದು ಮಂಗಳೂರಿನಲ್ಲಿ ನಾಲ್ಕು ಅದ್ದೂರಿ ಸಭಾಭವನಗಳ ಲೋಕಾರ್ಪಣೆ – ಕೃಷ್ಣ ಪಾಲೆಮಾರ್
    Local News

    ಮೇ 23 ರಂದು ಮಂಗಳೂರಿನಲ್ಲಿ ನಾಲ್ಕು ಅದ್ದೂರಿ ಸಭಾಭವನಗಳ ಲೋಕಾರ್ಪಣೆ – ಕೃಷ್ಣ ಪಾಲೆಮಾರ್

    adminBy adminMay 21, 2026
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter LinkedIn Pinterest Email
    Navaloka media news
    Navaloka media news

    ಮಂಗಳೂರು,ಮೇ.21  : ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ನಾಲ್ಕು ಅತ್ಯಾಧುನಿಕ ಅದ್ದೂರಿ ಸಭಾಭವನಗಳ ಲೋಕಾರ್ಪಣೆ ಗೊಳ್ಳಲಿದೆ ಎಂದು ಮಾಜಿ ಸಚಿವ ಹಾಗೂ ವಿಕಾಸ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಕೃಷ್ಣ ಜೆ ಪಾಲೆಮಾರ್ ಬುಧವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

    ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, ಲ್ಯಾಂಡ್ ಲಿಂಕ್ಸ್ ಸಂಸ್ಥೆಯ 45 ವರ್ಷಗಳ ಹಾದಿಯ ಸವಿನೆನಪಿಗಾಗಿ ಮಂಗಳೂರಿನ ನಾಲ್ಕು ಕಡೆಗಳಲ್ಲಿ ನಾಲ್ಕು ಅತ್ಯಾಧುನಿಕ ಸಭಾಂಗಣಗಳು ಉದ್ಘಾಟನೆ ಗೊಳ್ಳಲಿದೆ. ಲ್ಯಾಂಡ್ ಲಿಂಕ್ಸ್, ಕರಾವಳಿ ಭಾಗದಲ್ಲಿ ಕಳೆದ 45 ವರ್ಷಗಳಿಂದ ಯಶಸ್ವಿ ಉದ್ಯಮವನ್ನು ನಡೆಸಿದೆ. ಈ ಸುದೀರ್ಘ ಯಶಸ್ವಿ ಹಾದಿಯ ಸವಿನೆನಪಿಗಾಗಿ ಸಂಸ್ಥೆಯು ಮಂಗಳೂರಿನ ಪ್ರಮುಖ ನಾಲ್ಕು ಸ್ಥಳಗಳಲ್ಲಿ ಪ್ರಪ್ರಥಮ ಬಾರಿಗೆ ಅತ್ಯಾಧುನಿಕ ಸೌಲಭ್ಯಗಳನ್ನೊಳ ಗೊಂಡ ನಾಲ್ಕು ಭವ್ಯ ಸಭಾಭವನಗಳನ್ನು ಏಕಕಾಲದಲ್ಲಿ ಲೋಕಾರ್ಪಣೆ ಮಾಡುತ್ತಿದೆ ಎಂದರು.

    ಪಾಲೆಮಾರ್ ಸಭಾಂಗಣಗಳ ಲೋಕಾರ್ಪಣಾ ಸಮಾರಂಭವು ಮೇ23ರಂದು ವೈಭವದಿಂದ ಜರುಗಲಿದೆ. ಅಂದು ಬೆಳಿಗ್ಗೆ 10ಗಂಟೆಗೆ ಮಂಗಳೂರಿನ ಮೇರಿಹಿಲ್ನ ಲ್ಲಿರುವ ಪಾಲೆಮಾರ್ ಕನ್ವೆನ್ಶನ್ ಸೆಂಟರ್ ನಲ್ಲಿ ಲೋಕಾರ್ಪಣಾ ಕಾರ್ಯಕ್ರಮ ನಡೆಯಲಿದೆ. ಸಮಾರಂಭದ ಮುಖ್ಯ ಅತಿಥಿಗಳಾಗಿ ಆಂಧ್ರ ಪ್ರದೇಶದ ಗೌರವಾನ್ವಿತ ರಾಜ್ಯಪಾಲರಾದ ಜ| ಎಸ್. ಅಬ್ದುಲ್ ನಜೀರ್ ಅವರು ಆಗಮಿಸಿ, ನಾಲ್ಕೂ ಸಭಾಂಗಣಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

    ಸಮಾರಂಭದಲ್ಲಿ ಭಾರತ ಸರ್ಕಾರದ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು. ಟಿ. ಖಾದರ್, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಬ್ರಿಜೇಶ್ ಚೌಟ, ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ, ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಮುಲ್ಕಿ-ಮೂಡುಬಿದಿರೆ ಕ್ಷೇತ್ರದ ಶಾಸಕರಾದ ಉಮಾನಾಥ ಕೋಟ್ಯಾನ್ ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ಐವನ್ ಡಿಸೋಜ ಸೇರಿದಂತೆ ಕರಾವಳಿ ಮತ್ತು ರಾಜ್ಯ ಮಟ್ಟದ ಹಲವಾರು ರಾಜಕೀಯ, ಸಾಮಾಜಿಕ, ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದರು.

    ಪಾಲೆಮಾರ್ ಗಾರ್ಡನ್ ಮೊರ್ಗನ್ಸ್ ಗೇಟ್ ಸುಂದರವಾದ ಹೊರಾಂಗಣ ಈಜುಕೊಳ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಮತ್ತು ಬೃಹತ್ ಹಸಿರು ಮೈದಾನ.ಸುಂದರ ವಿನ್ಯಾಸದ ಪಾರಂಪರಿಕ ಕಟ್ಟಡಗಳು ಇಲ್ಲಿನ ವಿಶೇಷ ತೆಯಾಗಿದೆ. ಪಾಲೆಮಾರ್ ಫಾರ್ಮ್ಸ್, ಸುರತ್ಕಲ್ ನಗರ ಪ್ರದೇಶದ ವಾತಾವರಣದಿಂದ ದೂರವಿದ್ದು, ನಿಸರ್ಗದ ಮೌನ, ತಂಪಾದ ಗಾಳಿ, ಮರಗಳ ನೆರಳು ಹಾಗೂ ಪಕ್ಷಿಗಳ ಕಲರವದ ನಡುವೆ ಹಸಿರನ್ನು ಪ್ರೀತಿಸುವವರಿಗಾಗಿ ಸುರತ್ಕಲ್ ಸಮೀಪ 20 ಎಕರೆ ವಿಶಾಲವಾದ ಜಾಗ ದಲ್ಲಿ ಈ ಫಾರ್ಮ್ಸ್ ಸಿದ್ಧಗೊಂಡಿದೆ. ಆಪ್ತ ಒಡನಾಡಿಗಳೊಂದಿಗೆ ಆಚರಿಸುವ ಮದುವೆ, ಹೊರಾಂಗಣ ಕಾರ್ಯಕ್ರಮ ಗಳು, ಬರ್ತ್ಡೇ ಪಾರ್ಟಿಗಳು, ಮೆಹೆಂದಿ ಹಾಗೂ ಕೌಟುಂಬಿಕ ಸಮಾರಂಭಗಳಿಗೆ ಇದು ಸೂಕ್ತ ತಾಣ.ನೇತ್ರಾವತಿ ಸಭಾಭವನ, ಮಂಗಳೂರಿನ ನೇತ್ರಾವತಿ ನದಿಯ ದಡದಲ್ಲಿರುವ ಜೆಪ್ಪಿನಮೊಗರಿನ ಕಡೆಕಾರ್ ಎಂಬಲ್ಲಿ ಈ ಸಭಾಂಗಣ ತಲೆಯೆತ್ತಿದೆ. ವಿವಾಹ ಕಾರ್ಯಕ್ರಮಗಳು, ಧಾರ್ಮಿಕ ಕಾರ್ಯಕ್ರಮಗಳು, ಸಂಗೀತ ಕಛೇರಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇದು ಅತ್ಯಂತ ಪ್ರಶಸ್ತವಾಗಿದೆ. ಕಡಿಮೆ ದರದಲ್ಲಿ ಜನಸಾಮಾನ್ಯರಿಗೂ ಅನುಕೂಲವಾಗುವಂತೆ ಇದನ್ನು ನಿರ್ಮಿಸ ಲಾಗಿದೆ. ವಾಹನ ಪಾರ್ಕಿಂಗ್. ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ನಾಲ್ಕೂ ಸಭಾಭವನಗಳಲ್ಲಿ ಅತ್ಯಂತ ವಿಶಾಲವಾದ, ವ್ಯವಸ್ಥಿತವಾದ ಪಾರ್ಕಿಂಗ್ ಸ್ಥಳಾವಕಾಶವನ್ನು ಕಲ್ಪಿಸಲಾಗಿದೆ. ಜನಸಾಮಾನ್ಯರ ಸಣ್ಣ ಬಜೆಟ್ನ ಕಾರ್ಯಕ್ರಮ ಗಳವರೆಗೆ, ಪ್ರತಿಯೊಬ್ಬರ ಆರ್ಥಿಕ ಶಕ್ತಿಗೆ ತಕ್ಕಂತೆ ಇಲ್ಲಿ ಸಭಾಂಗಣಗಳು ಲಭ್ಯವಿವೆ. ಎಲ್ಲ ವರ್ಗದ ಜನರಿಗೂ ಕೈಗೆಟಕುವ ದರದ ಸಭಾಂಗಣಗಳನ್ನು ಇಲ್ಲಿ ರೂಪಿಸಲಾಗಿದೆ ಎಂದು  ತಿಳಿಸಿದ್ದಾರೆ.

    ಪತ್ರಿಕಾಗೋಷ್ಠಿಯಲ್ಲಿ ವಿಕಾಸ ಎಜುಕೇಶನ್ ಟ್ರಸ್ಟ್ ನ ಟ್ರಸ್ಟಿಗಳಾದ ಜೆ.ಕೆ.ರಾವ್, ಸೂರಜ್ ಕುಮಾರ್ ಕಲ್ಯ, ಕೊರಗಪ್ಪ, ಜೆ.ಸಂತೋಷ್ ಕುಮಾರ್, ಲ್ಯಾಂಡ್ ಲಿಂಕ್ಸ್ ನ ಉಪಾಧ್ಯಕ್ಷ ಪ್ರದೀಪ್ ಪಾಲೆಮಾರ್ ಮೊದಲಾದವರು ಉಪಸ್ಥಿತರಿದ್ದರು.

    Navaloka media news
    Navaloka media news
    Share. Facebook Twitter Pinterest LinkedIn WhatsApp Reddit Tumblr Email
    admin
    • Website

    Related Posts

    Local News September 12, 2026

    ಅಡಿಕೆ ಹಾಳೆ ತಟ್ಟೆಗಳಲ್ಲಿ ಅರೆಕೋಲಿನ್ ಪ್ರಮಾಣ ಅತ್ಯಂತ ಕಡಿಮೆ – ಅಗ್ರಿ ಲೀಫ್ ಸಹ ಸಂಸ್ಥಾಪಕ ಅವಿನಾಶ್ ರಾವ್

    Local News September 11, 2026

    ಮಂಗಳೂರು : ಕೆಎಂಸಿಯಲ್ಲಿ 70ನೇ ವರ್ಷದ ಗಣೇಶ ಚತುರ್ಥಿ ಸಂಭ್ರಮ

    Local News September 10, 2026

    ಮಂಗಳೂರು: ಕ್ಯಾಂಪ್ಕೊ ದಾಖಲೆಯ ಸಾಧನೆ ; ₹3,735 ಕೋಟಿ ವಹಿವಾಟು, ₹49.62 ಕೋಟಿ ಲಾಭ

    Local News September 10, 2026

    ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಪದ್ಮರಾಜ್ ಆರ್. ಪೂಜಾರಿ ನೇಮಕ

    Local News September 9, 2026

    ಮಂಗಳೂರು : ಶ್ರೀ ರಾಮ ಕೃಷ್ಣ ಮಠದಲ್ಲಿ ಕಲಾಸಾಧನ ವತಿಯಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಸಂಭ್ರಮ ‘ ರಾಗ ಸುಧಾ’

    Local News September 8, 2026

    ಸೆ.14 -16 : ಬಂಟ್ಸ್ ಹಾಸ್ಟೇಲ್‌ನಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

    Comments are closed.

    Demo
    Don't Miss
    Local News September 12, 2026

    ಅಡಿಕೆ ಹಾಳೆ ತಟ್ಟೆಗಳಲ್ಲಿ ಅರೆಕೋಲಿನ್ ಪ್ರಮಾಣ ಅತ್ಯಂತ ಕಡಿಮೆ – ಅಗ್ರಿ ಲೀಫ್ ಸಹ ಸಂಸ್ಥಾಪಕ ಅವಿನಾಶ್ ರಾವ್

    ಮಂಗಳೂರು, ಸೆ.12 : ಅಡಿಕೆ ಹಾಳೆಯಿಂದ ತಯಾರಿಸುವ ತಟ್ಟೆಗಳಲ್ಲಿ ಅಡಿಕೆಗೆ ಸಂಬಂಧಿಸಿದ ಹಾನಿಕಾರಕ ಅಂಶಗಳ ಪ್ರಮಾಣ ಅತ್ಯಂತ ಕಡಿಮೆ ಇದೆ.ಹಲವು…

    ಮಂಗಳೂರು : ಕೆಎಂಸಿಯಲ್ಲಿ 70ನೇ ವರ್ಷದ ಗಣೇಶ ಚತುರ್ಥಿ ಸಂಭ್ರಮ

    September 11, 2026

    ಮಂಗಳೂರು: ಕ್ಯಾಂಪ್ಕೊ ದಾಖಲೆಯ ಸಾಧನೆ ; ₹3,735 ಕೋಟಿ ವಹಿವಾಟು, ₹49.62 ಕೋಟಿ ಲಾಭ

    September 10, 2026

    ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಪದ್ಮರಾಜ್ ಆರ್. ಪೂಜಾರಿ ನೇಮಕ

    September 10, 2026
    Stay In Touch
    • Facebook
    • Twitter
    • Pinterest
    • Instagram
    Facebook X (Twitter) Instagram Pinterest
    • Home
    • Local News
    • State News
    • National/International news
    • Film News
    • Contact Us
    © 2026 All Right Reserved. Designed by Blueline Computers.

    Type above and press Enter to search. Press Esc to cancel.