ಉಡುಪಿ, ಆ. 17 : ಮೀನುಗಾರಿಕೆ ವೇಳೆ ಮೀನುಗಾರರೊಬ್ಬ ಬೋಟಿನಿಂದ ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ಮಲ್ಪೆಯಲ್ಲಿ ನಡೆದಿದೆ.
ಮೃತರನ್ನು ಭದ್ರಾವತಿ ಬೆಳ್ಳಿಗೇರಿ ಗ್ರಾಮದ ಸುನಿತಮ್ಮ ಎಂಬವರ ಮಗ ಸಂಜೀವ(33) ಎಂದು ಗುರುತಿಸಲಾಗಿದೆ.
ಸಂಜೀವ ಅವರು ಮಲ್ಪೆ ಬಂದರಿನ ರಜತ ಎಂಬ ಹೆಸರಿನ ಮೀನುಗಾರಿಕೆ ಬೋಟಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಇವರು, ಆ.14ರಂದು ಮಧ್ಯಾಹ್ನ 1:30ರ ಸುಮಾರಿಗೆ ಮೀನುಗಾರಿಕೆಗೆ ಬಿಟ್ಟ ಬಲೆಯನ್ನು ಮೇಲಕ್ಕೆ ಎಳೆಯುತ್ತಿರುವಾಗ ಒಮ್ಮೆಲೇ ಬಂದ ಅಬ್ಬರದ ಅಲೆಗೆ ಬೋಟು ಅಲುಗಾಡಿ ಕಾಲು ಜಾರಿ ನೀರಿಗೆ ಬಿದ್ದು ನಾಪತ್ತೆಯಾದರು. ಬಳಿಕ ಹುಡುಕಾಟ ನಡೆಸಿದಾಗ ಸಂಜೆ 6:30ರ ಸುಮಾರಿಗೆ ಅಲ್ಲೇ ಸಮೀಪ ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











