ಕಠ್ಮಂಡು, ಆ. 30 : ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ) 395 ಪವರ್‌ಮ್ಯಾನ್‌ಗಳನ್ನು ನೇಮಕ ಮಾಡಿಕೊಂಡಿದೆ. ಇನ್ನೂ ಕೂಡ ಪವರ್‌ಮೇನ್ ಹುದ್ದೆಗಳು ಖಾಲಿ ಇದೆ. 165 ಮಂದಿಯನ್ನು ನೇಮಕ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಹರೀಶ್ ಕುಮಾರ್ ಕೆ. ಅವರು ಶನಿವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮೆಸ್ಕಾಂನಲ್ಲಿ ಖಾಲಿ ಇರುವ ಪವರ್‌ಮೇನ್ ಹುದ್ದೆಗಳ ಭರ್ತಿ ಮಾಡಲು 430 ಹುದ್ದೆಗಳಿಗೆ ನೋಟಿಫಿಕೇಶನ್ ಆಗಿತ್ತು. ಈ ಪೈಕಿ 395 ಮಂದಿಯ ನೇಮಕವಾಗಿದ್ದು, ಅವರಿಗೆ ಈಗಾಗಲೇ ನೇಮಕಾತಿ ಪತ್ರ ನೀಡಲಾಗಿದೆ ಎಂದರು.
ನಾಲ್ಕು ಜಿಲ್ಲೆಗಳ ವ್ಯಾಪ್ತಿಗೊಳಪಟ್ಟ ಮೆಸ್ಕಾಂನಲ್ಲಿ ಪವರ್‌ಮೆನ್‌ಗಳಳಿಗೆ ಸುರಕ್ಷತೆಯ ದೃಷ್ಟಿಯಿಮದ ಕೆಲಸ ನಿರ್ವಹಿಸಲು 705 ಸಂಖ್ಯೆಯ ನಾನ್ ಕಾನ್‌ಟ್ಯಾಕ್ಟ್ ವೋಲ್ಟೇಜ್ ಡಿಟೆಕ್ಟರ್ಸ್(ಎನ್‌ಸಿವಿಡಿ)ಅನ್ನು ನೀಡಲಾಗಿದೆ ಎಂದು ತಿಳಿಸಿದರು.
ಆನೆ ಕಾರಿಡಾರ್ ಇರುವ ಕಡೆ ಹಾಗೂ ಇತರ ಕಾಡು ಪ್ರದೇಶಗಳ ಬಳಿ ವಿದ್ಯುತ್ ಮಾರ್ಗವನ್ನು ಕವರ್ಡ್ ಕಂಡಕ್ಟ (ವಿದ್ಯುತ್ ತಂತಿಗೆ ಸುರಕ್ಷಾ ಕವಚ ಇರಲಿದೆ) ಆಗಿ ಮಾರ್ಪಡಿಸಲಾಗುವುದು. ಪುತ್ತೂರು, ಶಿವಮೊಗ್ಗ, ಸಾಗರ, ಚಿಕ್ಕಮಗಳೂರು-1 ಮತ್ತು 2, ಕೊಪ್ಪ, ಕುಂದಾಪುರ ವಿಭಾಗಗಳ ವ್ಯಾಪ್ತಿಯಲ್ಲಿ ಈ ಕಾಮಗಾರಿ ಅನುಷ್ಠಾನಗೊಳ್ಳಲಿದೆ ಎಂದರು.
ಉಳ್ಳಾಲ, ಮಣ್ಣಗುಡ್ಡ ಹಾಗೂ ಕಾವೂರು ಉಪವಿಭಾಗಗಳಲ್ಲಿ ನೆಲದಡಿಯಲ್ಲಿ ವಿದ್ಯುತ್ ಮಾರ್ಗ ಅಳವಡಿಸಲು ಕ್ರಮ ವಹಿಸಲಾಗಿದ್ದು, ಕೆಲವೆಡೆ ಕಾಮಗಾರಿ ಪ್ರಗತಿಯಲ್ಲಿದೆ. ಗ್ರಾಮ ಪಂಚಾಯಿತಿಗಳಿಂದ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಂದ ಮೆಸ್ಕಾಂಗೆ – 305.84 ಕೋಟಿ ಬಿಲ್ ಬಾಕಿ ಇದೆ ಎಂದು ತಿಳಿಸಿದರು.
ಈ ಮಳೆಗಾಲದಲ್ಲಿ ಗಾಳಿ ಮಳೆಯಿಂದಾಗಿ ಒಟ್ಟು 17,770 ವಿದ್ಯುತ್ ಕಂಬಗಳು ಹಾಗೂ 496.37 ಕಿ.ಮೀ ವಿದ್ಯುತ್ ಮಾರ್ಗ ಹಾನಿಗೊಂಡಿದೆ. ಮೆಸ್ಕಾಂಗೆ 1 25.77 ಕೋಟಿ ನಷ್ಟ ಉಂಟಾಗಿದೆ ಎಂದರು.
ಮಳೆಗಾಲದಲ್ಲಿ ತುರ್ತು ನಿರ್ವಹಣಾ ಕೆಲಸ ನಿರ್ವಹಿಸಲು 489 ಜನರ ಕಾರ್ಯಪಡೆ ಹಾಗೂ 62 ವಾಹನಗಳನ್ನು ಹೆಚ್ಚುವರಿಯಾಗಿ ವ್ಯವಸ್ಥೆಗೊಳಿಸಲಾಗಿದೆ. ದೂರವಾಣಿ ಕರೆಗಳ ನಿರ್ವಹಣೆಗೆ 23 ಮಂದಿಯ ವಿಶೇಷ ಪಡೆ ಸಜ್ಜಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ದೀಪಕ್ ಉಪಸ್ಥಿತರಿದ್ದರು.









