ಮಂಗಳೂರು, ಸೆ.11 : ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ 70ನೇ ವರ್ಷದ ಗಣೇಶ ಚತುರ್ಥಿ ಉತ್ಸವವನ್ನುಲೈಟ್ಹೌಸ್ ಹಿಲ್ ರೋಡ್ ಕ್ಯಾಂಪಸ್ನಲ್ಲಿ ಸೆ.14 ಮತ್ತು 15 ರಂದು ಆಚರಿಸಲು ಸಜ್ಜಾಗಿದೆ ಎಂದು ಕೆಎಂಸಿ ಮಂಗಳೂರು ಡೀನ್ ಡಾ.ಬಿ. ಉಣ್ಣಿಕೃಷ್ಣನ್ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶ ಚತುರ್ಥಿ ಉತ್ಸವವು ಕೆಎಂಸಿ ಸಮುದಾಯದ ಏಕತೆ, ಸೌಹಾರ್ದತೆ ಮತ್ತು ಪರಸ್ಪರ ಬಾಂಧವ್ಯದ ಸಂಕೇತವಾಗಿದ್ದು, ಪ್ರತಿವರ್ಷ ಉತ್ಸಾಹದಿಂದ ಆಚರಿಸಲಾಗುತ್ತಿದೆ ಎಂದರು.
ಕೆಎಂಸಿ ಮಂಗಳೂರಿನ ಅಸೋಸಿಯೇಟ್ ಡೀನ್ ಡಾ.ಶೀತಲ್ ಉಳ್ಳಾಲ್ ಅವರು ಮಾತನಾಡಿ, ಸಂಭ್ರಮಾಚರಣೆಯು ಸೆ. 14 ಸೋಮವಾರ ಬೆಳಿಗ್ಗೆ 9:00 ಗಂಟೆಗೆ ಲೈಟ್ಹೌಸ್ ಹಿಲ್ ರೋಡ್ ಕ್ಯಾಂಪಸ್ನಲ್ಲಿ ಗಣೇಶ ಸ್ಥಾಪನಾ ಪೂಜೆಯೊಂದಿಗೆ ಪ್ರಾರಂಭವಾಗಲಿದೆ. ಸೆ. 15 ಮಂಗಳವಾರ ಸಂಜೆ 6ಕ್ಕೆ ಭವ್ಯಶೋಭಾಯಾತ್ರೆ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಎಂಸಿ ಮಂಗಳೂರಿನ ಅಸೋಸಿಯೇಟ್ ಡೀನ್ ಡಾ. ಮಂಗಳಾ ಎಂ.ಪೈ, ಡಾ.ಅಶ್ಫಾಕ್ ಮೊಹಮ್ಮದ್ ಹಾಗೂ ವಿದ್ಯಾರ್ಥಿ ಸಂಘದ ಪ್ರಮುಖರಾದ ಅನನ್ಯಾ ಹೆಗ್ಗೇರಿ ಉಪಸ್ಥಿತರಿದ್ದರು.











