ಮಂಗಳೂರು, ಸೆ.13 : ಅವಿಕಾ ಪ್ರೊಡಕ್ಷನ್ ಮತ್ತು ಬಿಆರ್ ಬಿ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾಗಿರುವ ಅರ್ಜುನ್ ಕಾಪಿಕಾಡ್ (ದೇವ್) ನಿರ್ದೇಶನ, ನಟನೆಯ “ಟಾಸ್” ತುಳು ಸಿನಿಮಾ ಸೆಪ್ಟೆಂಬರ್ 18 ರಂದು ರಾಜ್ಯಾದ್ಯಂತ ತೆರೆಕಾಣಲಿದೆ ಚಿತ್ರದ ನಿರ್ದೇಶಕ ಅರ್ಜುನ್ ಕಾಪಿಕಾಡ್ ಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಟಾಸ್” ಸಿನಿಮಾದ ಕಥೆ,ಚಿತ್ರಕಥೆ, ಸಂಭಾಷಣೆ, ಹಾಡುಗಳು ದೇವದಾಸ್ ಕಾಪಿಕಾಡ್ ಅವರದ್ದಾಗಿದೆ. ನಿರ್ದೇಶನವನ್ನುಅರ್ಜುನ್ ಕಾಪಿಕಾಡ್ ಅವರು ಮಾಡಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ ಎಂದರು.
ಚಿತ್ರದನಿರ್ಮಾಪಕರು ಪಿ ಆ್ಯಂಡ್ ವೈ ವಲ್ಡ್ ಟೂರ್ಸ್ ಎಲ್ ಎಲ್ ಪಿ ಸಾಗರ್ ಪೂಜಾರಿ, ಸಹ ನಿರ್ದೇಶಕರು ಯಶಾಂತ್ ಕಲ್ಲಡ್ಕ, ರಾಕೇಶ್ ಬಿ.ಜೆ.ವಿಕ್ರಮ್ ದೇವಾಡಿಗ, ಸಹಾಯಕ ನಿರ್ದೇಶಕರು ಸೌರವ್, ರಾಮ್ ,ಸುಜಿತ್ ,ವಿನೋದ್ ,ಆಶಿಷ್ ರಾವ್ ಛಾಯಾಗ್ರಹಣ ಜೋಯೆಲ್ ಶಮನ್ ಡಿ’ಸೋಜಾ, ಸಹಾಯಕ ಛಾಯಾಗ್ರಾಹಕರು ಅಮನ್ ಪ್ರಖ್ಯಾತ್, ಕಲಾ ನಿರ್ದೇಶನ ರಾಜೇಶ್ ಕೊಳಕೆ, ರಾಜೇಶ್ ಬಾಂಧ್ಯೋಡ್, ಸಂಕಲನ ಯಶ್ವಿನ್ ಕೆ. ಶೆಟ್ಟಿಗಾರ್, ಸಂಗೀತ ಮಣಿಕಾಂತ್ ಕದ್ರಿ, ಕಾರ್ಯಕಾರಿ ನಿರ್ಮಾಪಕ ಸಂದೀಪ್ ಶೆಟ್ಟಿ, ವಸ್ತ್ರ ವಿನ್ಯಾಸ ಅನುಪ್ ಸಾಗರ್. ವಿತರಕರು ಸಚಿನ್ ಎಎಸ್ ಉಪ್ಪಿನಂಗಡಿ ಅವರು ಆಗಿರುತ್ತಾರೆ ಎಂದು ತಿಳಿಸಿದರು.
ಟಾಸ್ ಚಿತ್ರ ಮಂಗಳೂರು, ಸುರತ್ಕಲ್, ಪಡುಬಿದ್ರೆ, ಉಡುಪಿ, ಮಣಿಪಾಲ, ಕುಂದಾಪುರ, ಕಾರ್ಕಳ, ಬೆಳ್ತಂಗಡಿ, ಸುಳ್ಯ, ಪುತ್ರೂ ರಿನಲ್ಲಿ ಬಿಡುಗಡೆಗೊಳ್ಳಲಿದೆ. ಬೆಂಗಳೂರು, ಮೈಸೂರು ಮೊದಲಾದ ಕಡೆಗಳಲ್ಲೂ ಸಿನಿಮಾ ಬಿಡುಗಡೆಯಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನವೀನ್ ಡಿ ಪಡೀಲ್, ಭೋಜರಾಜ ವಾಮಂಜೂರು, ಸುತೇಜ್ ಶೆಟ್ಟಿ ಚೈತ್ರಾ ಶೆಟ್ಟಿ, ಜೋಯಲ್, ಸಂದೀಪ್ ಶೆಟ್ಟಿ, ಶರ್ಮಿಳಾ ಕಾಪಿಕಾಡ್ ಮೊದಲಾದವರು ಉಪಸ್ಥಿತರಿದ್ದರು.









