ಮಂಗಳೂರು, ಅ.11: ಕುದ್ರೊಳಿಯ ಶ್ರೀ ಗೋಕರ್ಣನಾಥ ಕ್ಷೆತ್ರದಲ್ಲಿ ನಡೆಯುವ ನವರಾತ್ರಿ ಮಹೋತ್ಸವ -ಮಂಗಳೂರು ದಸರಾಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ಕ್ಷೇತ್ರದ ದರ್ಬಾರ್ ಮಂಟಪದಲ್ಲಿ ಕ್ಷೆತ್ರದ ಅಭಿವೃದ್ಧಿಯ ರೂವಾರಿ ಹಾಗೂ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ನೇತೃತ್ವದಲ್ಲಿ ಶ್ರಿ ಮಹಾಗಣಪತಿ, ಶ್ರೀ ಶಾರದಾ ಮಾತೆ, ಆದಿಶಕ್ತಿಯೊಂದಿಗೆ ಸ್ಕಂದ ಮಾತೆ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ದೇವಿಯರ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್, ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ, ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ,ಕ್ಷೇತ್ರಾಡಳಿತ ಮಂಡಳಿ ಟ್ರಸ್ಟಿಗಳಾದ ಎಚ್.ಎಸ್.ಸಾಯಿರಾಂ, ಜಗದೀಪ್ ಡಿ. ಸುವರ್ಣ, ಸಂತೋಷ್ ಕುಮಾರ್ ಜೆ., ಕೃತಿನ್ ಅಮೀನ್, ಕಿಶೋರ್ ದಂಡೆಕೇರಿ, ಪ್ರಮುಖರಾದ ಮಾಲತಿ ಜನಾರ್ದನ ಪೂಜಾರಿ, ಕ್ಷೇತ್ರ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಸಹ ಅಧ್ಯಕ್ಷೆ ಡಾ. ಅನಸೂಯ ಬಿ.ಟಿ. ಸಾಲಿಯಾನ್, ಉಪಾಧ್ಯಕ್ಷ ಡಾ. ಬಿ.ಜಿ. ಸುವರ್ಣ, ಸದಸ್ಯರಾದ ವೇದ ಕುಮಾರ್, ಹರೀಶ್ ಕುಮಾರ್ ಬೆಳ್ತಂಗಡಿ, ಕೆ. ಚಿತ್ತರಂಜನ್ ಗರೋಡಿ, ವಿಶ್ವನಾಥ ಕಾಸರಗೋಡು, ಎಸ್. ಜಯ ವಿಕ್ರಮ್, ಜಿತಿನ್ ಅತ್ತಾವರ, ಎನ್.ಹರೀಶ್ಚಂದ್ರ, ರಾಮನಾಥ್ ಕಾರಂದೂರು, ಹರಿಕೃಷ್ಣ ಬಂಟ್ವಾಳ, ಧೂಮಪ್ಪಮೇಸ್ತ್ರಿ, ಶೈಲೇಂದ್ರ ವೈ.ಸುವರ್ಣ, ಸೂರ್ಯಕಾಂತ್ ಜೆ. ಸುವರ್ಣ, ಲೀಲಾಕ್ಷ ಕರ್ಕೇರ, ರಾಧಾಕೃಷ್ಣ ಚಂದನ್ ದಾಸ್, ಡಿ.ಡಿ. ಕಟ್ಟೆಮಾರ್, ಪಿ.ಕೆ. ಗೌರವಿ ರಾಜಶೇಖರ್, ಬಿ. ವಾಸುದೇವ ಕೋಟ್ಯಾನ್, ಲತೀಶ್ ಎಂ.ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.











