ಬೆಂಗಳೂರು: ರಾಜ್ಯಾದ್ಯಂತ ಕೃಷಿ ಭೂಮಿಯನ್ನು ಐದು ಗುಂಟೆಗಿಂತಲೂ ತುಂಡು ಭೂಮಿಯಾಗಿ ಪರಿವರ್ತಿಸಿ, 11-ಇ ನಕ್ಷೆ ಮತ್ತು ಪೋಡಿ ಕಾರ್ಯ ಕೈಗೊಳ್ಳೋದಕ್ಕೆ ರಾಜ್ಯ ಸರ್ಕಾರ ಷರತ್ತು ಬದ್ಧ ಅನುಮತಿಯನ್ನು ನೀಡಿದೆ.
ಈ ಬಗ್ಗೆ ಕಂದಾಯ ಇಲಾಖೆಯ ( Revenue Department ) ಸರ್ಕಾರದ ಉಪ ಕಾರ್ಯದರ್ಶಿ ಭೂ ಮಾಪನ ಇಲಾಖೆಗೆ ಪತ್ರದಲ್ಲಿ ಸ್ಪಷ್ಟ ಪಡಿಸಿದ್ದು, ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 108ರಡಿ ಕೃಷಿ ಉದ್ದೇಶಕ್ಕಾಗಿ ಬಳಸಲಾಗುವ ಭೂಮಿಯನ್ನು ಒಳಗೊಂಡಿರುವ ಸರ್ವೆ ನಂಬರಿನ ( ಹಿಸ್ಸಾ ಸರ್ವೆ ನಂಬರ್ ಗಳನ್ನೂ ಒಳಗೊಂಡು ) ಕನಿಷ್ಠ ವಿಸ್ತೀರ್ಣವನ್ನು ರಾಜ್ಯದ ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ 03 ಗುಂಟೆ ಹಾಗೂ ಇನ್ನುಳಿದ ಜಿಲ್ಲೆಗಳಲ್ಲಿ 5 ಗುಂಟೆಗಳಿಗೆ ನಿಗದಿಪಡಿಸಲು ಈ ಕೆಳಕಂಡ ಷರತ್ತಿಗೊಳಪಟ್ಟು ಅನುಮತಿ ನೀಡಿದೆ ಎಂದು ತಿಳಿಸಿದ್ದಾರೆ.
- ಈ ರೀತಿಯ ಕನಿಷ್ಟ ವಿಸ್ತೀರ್ಣದ ನಿರ್ಬಂಧವನ್ನು ಭವಿಷ್ಯಾವರ್ತಿಯಾಗಿ ಜಾರಿಗೆ ತರತಕ್ಕದ್ದು.
- ಪ್ರಸ್ತುತ ನಿಗಧಿ ಪಡಿಸುತ್ತಿರುವ ಕನಿಷ್ಠ ವಿಸ್ತೀರ್ಣಕ್ಕಿಂತ ಈಗಾಗಲೇ ಕಡಿಮೆ ವಿಸ್ತೀರ್ಣ ಹೊಂದಿರುವ ಜಮೀನುಗಳಿಗೆ ಈ ನಿರ್ಬಂಧವನ್ನು ಅನ್ವಯಿಸುವಂತಿಲ್ಲ
- ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಕಲಂ 108ರಡಿ ನಿರ್ದಿಷ್ಟಪಡಿಸಿರುವ ಅಂಶಗಳನ್ನು ಪಾಲಿಸತಕ್ಕದ್ದು
ಈ ಮೇಲ್ಕಂಡ ಷರತ್ತಿಗೆ ಒಳಪಟ್ಟು, ರಾಜ್ಯದಲ್ಲಿನ ಕೃಷಿ ಭೂಮಿಯನ್ನು ಬದಲಾಯಿಸಿ, ಕಮರ್ಷಿಯಲ್ ಉಪಯೋಗಕ್ಕೆ ಬಳಕೆ ಮಾಡಲು ಕಂದಾಯ ಇಲಾಖೆ ಅನುಮತಿ ನೀಡಿದೆ. ಈ ಮೂಲಕ ಕೃಷಿ ಭೂಮಿಯನ್ನು ಕಮರ್ಷಿಯಲ್ ಭೂಮಿಯಾಗಿ ಪರಿವರ್ತಿಸೋ ನಿರೀಕ್ಷೆಯಲ್ಲಿದ್ದ ಜನತೆಗೆ ಗುಡ್ ನ್ಯೂಸ್ ನೀಡಿದೆ.
2 Comments
Pingback: อัตราต่อรอง พนันบอลยูโร 2024 ค่านํ้าเยอะ กันได้เล่นที่ LSM99
Pingback: บริการส่ง SMS