ಮಂಗಳೂ ರು : ವೇಗಸ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ,ನಿರ್ದೇಶಕ ರಾಮ್ ಶೆಟ್ಟಿ ನಿರ್ದೇಶನದ ರೋಷನ್ ವೇಗಸ್ ನಿರ್ಮಾಣದ ‘ಏರೆಗಾವುಯೆ ಕಿರಿಕಿರಿ’ ತುಳು ಚಿತ್ರ ಡಿಸೆಂಬರ್ 24 ರಂದು ಮಂಗಳೂರಿನ ಪಿವಿಆರ್ ಸಿನಿಮಾಸ್, ಸಿನಿಪೋಲಿಸ್, ಬಿಗ್ ಸಿನಿಮಾಸ್, ಉಡುಪಿಯ ಕಲ್ಪನಾ ಥಿಯೇಟರ್, ಮಣಿಪಾಲದ ಭಾರತ್ ಮಾಲ್, ಕಾರ್ಕಳದ ರಾಧಿಕಾ, ಮಡಿಕೇರಿಯ ಸುಂಟಿಕೊಪ್ಪದ ಗಣೇಶ್ ಟಾಕೀಸ್ ಮತ್ತು ಬೆಳ್ತಂಗಡಿಯ ಭಾರತ್ ಚಿತ್ರಮಂದಿರದಲ್ಲಿ ಚಿತ್ರ ತೆರೆ ಕಾಣಲಿದೆ ಎಂದು ಪತ್ರೀಕಾಗೋಷ್ಠಿಯಲ್ಲಿ ನಟ ನವೀನ್ ಡಿ ಪಡೀಲ್ ಹೇಳಿದರು.
ತುಳು ಚಲನಚಿತ್ರ ನಟ ನವೀನ್ ಡಿ ಪಡೀಲ್, ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್, ರೋಶನ್ ವೇಗಸ್, ಶ್ರದ್ಧಾ ಸಾಲಿಯಾನ್, ಪ್ರದೀಪ್ ಚಂದ್ರ, ಹರೀಶ್ ವಾಸು ಶೆಟ್ಟಿ, ಮೊಹಮ್ಮದ್ ನಹೀಂ, ಸಾಯಿ ಕೃಷ್ಣ ಕುಡ್ಲ, ಐಶ್ವರ್ಯಾ ಹೆಗ್ಡೆ, ಶೇಖರ್ ಭಂಡಾರಿ, ಉಮೇಶ್ ಮಿಜಾರ್, ಸುಂದರ್ ರೈ ಮಂದಾರ, ಮಣಿಬೆಟ್ಟು ಕೊಡೆಪದವು, ಸಂದೀಪ್ ಶೆಟ್ಟಿ ಸುನೀಲ್ ನೆಲ್ಲಿಗುಡ್ಡೆ, ಸರೋಜಿನಿ ಶೆಟ್ಟಿ, ರಘು ಪಾಂಡೇಶ್ವರ, ಪವಿತ್ರಾ ಶೆಟ್ಟಿ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ರವಿ ಚಂದನ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ.ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಸಾಹಿತ್ಯ ಮತ್ತು ಸಂಭಾಷಣೆಯನ್ನು ಡಿಸಿಬಿ ಶೇಖರ್ ಬರೆದಿದ್ದಾರೆ. ಮದನ್ ಹರಿಣಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಸಾಹಸಗಳನ್ನು ಮಾಸ್ ಮಾದ ನಿರ್ದೇಶಿಸಿದ್ದಾರೆ. ಚಿತ್ರಕಥೆ ಸಚಿನ್ ಶೆಟ್ಟಿ ಕುಂಬ್ಳೆ ಅವರದ್ದಾಗಿದ್ದು, ಸಹಾಯಕ ನಿರ್ದೇಶನವನ್ನು ರಾಮ್ ದಾಸ್ ಸಸಿಹಿತ್ಲು ಮಾಡಿದ್ದಾರೆ.