ಮೈಸೂರು: ಕೊರೊನಾ ರೂಪಾಂತರಿ ಓಮಿಕ್ರಾನ್ ವೈರಸ್ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೂ ಕಾಣಿಸಿಕೊಂಡಿದೆ. ವಿದೇಶದಿಂದ ಬಂದಿದ್ದ 9 ವರ್ಷದ ಬಾಲಕಿಗೆ ಸೋಂಕು ತಗುಲಿದ್ದು ಸದ್ಯ ಸೋಂಕಿತ ಮಗುವಿಗೆ ಯಾವುದೇ ಲಕ್ಷಣಗಳಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.
ಮೈಸೂರು ಮೂಲದ ಕುಟುಂಬದವರು ಸ್ವಿಡ್ಜರ್ಲ್ಯಾಂಡ್ನಲ್ಲಿ ನೆಲೆಸಿದ್ದರು. ಕ್ರಿಸ್ಮಸ್ ಸಲುವಾಗಿ ಭಾರತಕ್ಕೆ ಬಂದಿದ್ದರು. ಭಾರತಕ್ಕೆ ಬರುವ ಮುಂಚೆ ಅಬುಧಾಬಿಗೆ ಬಂದು ಎರಡು ದಿನ ತಂಗಿದ್ದರು. ನಂತರ, ಅವರು ಡಿ.19 ರಂದು ಮೈಸೂರಿಗೆ ಬಂದಿದ್ದರು ಎನ್ನಲಾಗಿದೆ. ಪ್ರಾಥಮಿಕ, ದ್ವಿತೀಯ ಸೋಂಕಿತರ ಪತ್ತೆ ಮಾಡಲಾಗುತ್ತಿದೆ ಎಂದು ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿಯನ್ನು ನೀಡಿದ್ದಾರೆ..
ಈಗಾಗಲೇ ರಾಜ್ಯದ ದಕ್ಷಿಣಕನ್ನಡ, ಉಡುಪಿ, ಬೆಂಗಳೂರು, ಭದ್ರಾವತಿ ಮೊದಲಾದೆಡೆ ಸೋಂಕು ಕಾಣಿಸಿಕೊಂಡಿದ್ದು, ಇದೀಗಾ ಸೋಂಕು ಮೈಸೂರಿನಲ್ಲಿ ಕೂಡ ಪತ್ತೆಯಾಗಿದೆ.
2 Comments
spring jazz
Pingback: สเปรย์เลิกบุหรี่