ಮಂಗಳೂರು: ಕರಾವಳಿ ಸಂಗೀತ ಕಲಾವಿದರ ಒಕ್ಕೂಟದಿಂದ ಸ್ವರ ಕುಡ್ಲ ಸಿಸನ್ 4 ಸಂಗೀತ ಸ್ಪರ್ಧೆಯ ಗ್ರ್ಯಾಂಡ್ ಪಿನಾಲೆ ಹಾಗೂ 14ನೇ ವಾರ್ಷಿಕೋತ್ಸವದ ಸಮಾರಂಭವು ಮೇ21,ಶನಿವಾರ ನಗರದ ಪುರಭವನದಲ್ಲಿ ಜರಗಿತು.
ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್ ಅವರು ಇತರ ಗಣ್ಯರೊಂದಿಗೆ ಸೇರಿ ದೀಪವನ್ನು ಬೆಳಗಿಸಿ ಕಾರ್ಯಕ್ರಮಕ್ಕೆ ಶುಭಚಾಲನೆಯನ್ನು ನೀಡಿದರು,ನಂತರ ಮಾತಾಡಿ ಪ್ರಾರಂಭದ ದಿನಗಳಲ್ಲಿ 5 ಜನರಿಂದ ಆರಂಭವಾದ ಈ ಸಂಘವು ಬೆಳೆದು ಇಂದು 300-400ಕ್ಕೆರಿದೆ ಇದು ಸಂಘದ ಉತ್ತಮ ಬೆಳವಣಿಗೆಯಾಗಿದೆ.ಸಂಗೀತದಲ್ಲಿ ಸಾಧನೆ ಮಾಡಿದ ಬಹಳಷ್ಟು ಹಿರಿಯರಿಗೆ ಗೌರವಿಸುವ ಉತ್ತಮ ಕೆಲಸಕಾರ್ಯಗಳು ಕರಾವಳಿ ಸಂಗೀತ ಕಲಾವಿದರ ಒಕ್ಕೂಟದಿಂದ ನಡೆಯುತ್ತಿದ್ದು,ಇಂತಹ ಕಾರ್ಯಗಳು ಸಂಘದ ಬೆಳವಣಿಗೆಗೆ ಪ್ರಮುಖ ಪಾತ್ರವಾಗಿದೆ. ಈ ಕಲಾವಿದರ ಒಕ್ಕೂಟದಿಂದ ಇನ್ನಷ್ಡು ಸಾಮಾಜಿಕ ಹಾಗೂ ಉತ್ತಮ ಕಾರ್ಯಕ್ರಮಗಳು ಮೂಡಿಬರಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಗೀತದಲ್ಲಿ ಸಾಧನೆ ಮಾಡಿದ ಕಲಾವಿದರಾದ ಯಶವಂತ ದೇವಾಡಿಗ,ಹುಸೈನ್ ಕಾಟಿಪಳ್ಳ,ಪ್ರೇಮ್ ಕುಮಾರ್ ಲೋಬೋ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಎಲ್.ಶೇಟ್ ಡೈಮಂಡ್ ಹೌಸ್ ಮಾಲಕರು ಎಂ.ರವೀಂದ್ರ ಶೇಟ್,ಮತ್ಸ್ಯೋದ್ಯಮಿ ಮೋಹನ್ ಬೆಂಗ್ರೆ,ಅಧ್ವೆತ್ ಹುಂಡೈಯ್,ಬೆಂಗಳೂರು ಇದರ ಮಹಾಪ್ರಬಂಧಕರಾದ ಆನಂದ್ ಕುಮಾರ್,ದಾಸ್ ಪ್ರಮೋಷನ್ ಆಡಳಿತ ನಿರ್ದೇಶಕರು ಅನಿಲ್ ದಾಸ್,ಎಮ್.ಆರ್.ಪಿ.ಎಲ್ ಪ್ರಧಾನ ವ್ಯವಸ್ಥಾಪಕರಾದ ಕಿರಣ್ ಬಿ.,ಸಂಘದ ಅಧ್ಯಕ್ಷರಾದ ರಮೇಶ್ ಸಾಲಿಯಾನ್,ಉಪಾಧ್ಯಕ್ಷರಾದ ಕೇಶವ ಕನಿಲ್,ಕೋಶಾಧಿಕಾರಿ ಸಂತೋಷ್ ಅಂಚನ್,ಪ್ರಧಾನ ಕಾರ್ಯದರ್ಶಿ ದೀಪಕ್ ರಾಜ್ ಉಳ್ಳಾಲ್, ಮ.ನ.ಪಾ.ಸದಸ್ಯರು ಜಗದೀಶ್ ಶೆಟ್ಟಿ ಮತ್ತಿತ್ತರು ಉಪಸ್ಥಿತರಿದ್ದರು.