ನವದೆಹಲಿ : ನವೆಂಬರ್ ನಿಂದ ಪ್ರಯಾಣಿಕ ವಿಮಾನ ಮತ್ತು ಕಾರ್ಗೊ ವಿಮಾನದಲ್ಲಿ ಸಾಕು ಪ್ರಾಣಿಗಳ ಸಂಚಾರಕ್ಕೆ ಆಕಾಸ ಏರ್‌ಲೈನ್ಸ್ ಅವಕಾಶ ಕಲ್ಪಿಸಲಿದೆ ಎಂದು ಸಂಸ್ಥೆತಿಳಿಸಿದೆ. ಅ.15ರಿಂದ ಬುಕ್ಕಿಂಗ್ ಆರಂಭವಾಗಲಿದೆ. ಪ್ರತಿ ಸಾಕುಪ್ರಾಣಿಯನ್ನು ಬೋನಿನಲ್ಲಿ ಇರಿಸಬೇಕಾಗುತ್ತದೆ.
ಈ ಬಗ್ಗೆ ಮಾಹಿತಿ ನೀಡಿರುವ ಆಕಾಶ್ ಏರ್ಲೈನ್ಸ್ನ ಸಹ ಸಂಸ್ಥಾಪಕ ಪ್ರವೀಣ್ ಐಯ್ಯರ್, ಪ್ರಯಾಣಿಕ ವಿಮಾನದಲ್ಲಿ ಬೋನ್ ಸೇರಿ ತೂಕ 7 ಕೆಜಿ ಮೀರಬಾರದು. ಚೆಕ್-ಇನ್ನಲ್ಲಿ 32 ಕೆ.ಜಿ. ಮೀರಬಾರದು. ಹೆಚ್ಚಿನ ತೂಕವಿರುವ ಸಾಕು ಪ್ರಾಣಿಗಳಿಗೆ ಬೇರೆ ವ್ಯವಸ್ಥೆ ಇದೆ ಎಂದು ತಿಳಿಸಿದ್ದಾರೆ.