ಮಂಗಳೂರು ಮಾ.20 : ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆ ಅಂಗವಾಗಿ ಮಾ.15, ಬುಧವಾರ ಮಧ್ಯಾಹ್ನ ರಥಾರೋಹಣ, ರಾತ್ರಿ ರಥೋತ್ಸವ ವಿಜೃಂಭಣೆಯಿಂದ ಜರಗಿತು.
ಬುಧವಾರ ಪ್ರಾತಃಕಾಲ ಪೂಜೆ, ಗಣಪತಿ ಹೋಮ, ನವಕ ಕಲಶಾಭಿಷೇಕ, ಮಧ್ಯಾಹ್ನ 12ಗಂಟೆಗೆ ಪೂಜೆ ಯಾಗಿ ರಥಾರೋಹಣ ನಡೆಯಿತು. ಸಂಜೆ 7 ಗಂಟೆಗೆ ರಥೋತ್ಸವ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಶ್ರೀ ಭೂತಬಲಿ, ಕವಾಟ ಬಂಧನ, ಶಯನ ನಡೆಯಿತು. ಸಂಜೆ 5ರಿಂದ 9ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಮಾ. 16ರಂದು ಕ್ಷೇತ್ರದಲ್ಲಿ ಬೆಳಗ್ಗೆ 6.34ಕ್ಕೆ ಕವಾಟೋ ದ್ಘಾಟನೆ, ಅಭಿಷೇಕ ಪೂಜೆ, ಅಷ್ಟಾವಧಾನ, ತೀರ್ಥಪ್ರಸಾದ, ಬಲಿ, ತುಲಾಭಾರ, ಮಧ್ಯಾಹ್ನ ಮಹಾಪೂಜೆ, ಸಂಜೆ 7 ಗಂಟೆಗೆ ಬಲಿ ಹೊರಟು ಅವಭೃತ ಮಂಗಳ ಸ್ನಾನ, ಧ್ವಜಾವರೋಹಣ ನಡೆಯಿತು. ಶ್ರೀ ಕ್ಷೇತ್ರಕ್ಕೆ ಬೆಳಗ್ಗೆಯಿಂದಲೇ ಊರ- ಪರವೂರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.