ದಾವಣಗೆರೆ,ಏ. 08 :ಆನೆ ದಾಳಿಗೆ ಯುವತಿ ಯೊಬ್ಬಳು ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸೋಮ್ಲಾಪುರ ಗ್ರಾಮದಲ್ಲಿ ನಡೆದಿದೆ. ಮೃತ ಯುವತಿಯನ್ನು ಸೋಮ್ಲಾಪುರದ ಕವನ (17) ಎಂದು ಗುರುತಿಸಲಾಗಿದೆ.
ಬೆಳಿಗ್ಗೆ ಕವನ ಅವರ ತಾಯಿ ಜೊತೆಯಲ್ಲಿ ಜಮೀನಿಗೆ ತೆರಳಿದ್ದಳು. ಜಮೀನಿನಲ್ಲಿ ಹೋಗಿ ಅವರೆಕಾಯಿ ಬಿಡಿಸುವ ವೇಳೆ ಏಕಾಏಕಿ ಹಿಂದಿನಿಂದ ಆನೆ ದಾಳಿ ಮಾಡಿದೆ. ಗಂಭೀರವಾಗಿ ಗಾಯಗೊಂಡ ಕವನಾಳನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯದಲ್ಲೇ ಆಕೆ ಸಾವನ್ನಪ್ಪಿದ್ದಾಳೆ. ಗಾಯಗೊಂಡ ತಾಯಿ ಮಂಜುಳಾ ಅವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ವರದಿಯಾಗಿದೆ.