ಬೆಳ್ತಂಗಡಿ,ಜು. 10 : ದ್ವಿಚಕ್ರ ವಾಹನಕ್ಕೆ ಪಿಕಪ್ ಡಿಕ್ಕಿ ಹೊಡೆದು ಸ್ಥಳದಲ್ಲೇ ದ್ವಿಚಕ್ರ ಸವಾರ ಸಾವನ್ನಪ್ಪಿದ ಘಟನೆ ಕುಪ್ಪೆಟ್ಟಿಯಲ್ಲಿ ನಡೆದಿದೆ.
ಮೃತರನ್ನು ಶುಂಠಿಪಲಿಕೆ ನಿವಾಸಿ ಅಬೂಬಕರ್ ಎಂದು ಗುರುತಿಸಲಾಗಿದೆ.ಬೆಳ್ತಂಗಡಿ ಊರುವಲು ಗ್ರಾಮದ ಕುಪ್ಪೆಟ್ಟಿ ರಸ್ತೆ ಮಜ್ಜೆ ಎಂಬಲ್ಲಿ ಈ ಅಪಘಾತ ನಡೆದಿದೆ. ಅಪಘಾತದಲ್ಲಿ ಮೃತರ ಪತ್ನಿ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪುತ್ತೂರು ಸಂಚಾರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.