ಪುತ್ತೂರು, ಆ. 09 : ತೆಂಗಿನ ಮರ ಹತ್ತಿ ತೆಂಗಿನಕಾಯಿ ಕೀಳುವ ಕಾಯಕದಲ್ಲಿ ಪ್ರಸಿದ್ದಿ ಪಡೆದಿದ್ದ ಮಹಿಳೆಯೊಬ್ಬರು ತೆಂಗಿನ ಮರದಿಂದ ಕೆಳೆಗೆ ಬಿದ್ದು ಸಾವನ್ನಪ್ಪಿದ ಘಟನೆ ಕಡಬ ತಾಲೂಕಿನ ಸವಣೂರು ಸಮೀಪದ ಪುಣ್ಚಪ್ಪಾಡಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಪ್ರಮೋದ್ ಬೊಳ್ಳಾಜೆ ಪತ್ನಿ ಸುಚಿತ್ರಾ (30) ಎಂದು ಗುರುತಿಸಲಾಗಿದೆ.
ಸುಚಿತ್ರ ಅವರು ಮಹಿಳೆಯಾಗಿ ತೆಂಗಿನಕಾಯಿ ಕೀಳುವ ಕಾಯಕದಲ್ಲಿ ತೊಡಕಿಸಿಕೊಂಡಿದ್ದರಿಂದ ಅವರ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಹಲವಾರು ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿತ್ತು. ಮೃತರು ಪತಿ, ಇಬ್ಬರು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
3 Comments
Pingback: healing music
Pingback: รับซ่อมเครื่องออกกำลังกาย
Pingback: design my own cornhole board