ಬೆಂಗಳೂರು, ಆ. 30 : ಚಂದ್ರನ ದಕ್ಷಿಣ ಧ್ರುವದ ಮೇಲ್ಮೈಯಲ್ಲಿ ಗಂಧಕ ಇರುವುದನ್ನು ಚಂದ್ರನ ಅಂಗಳದಲ್ಲಿ ಸಂಚರಿಸುತ್ತಿರುವ ಚಂದ್ರಯಾನ-3 ರೋವರ್(ಪ್ರಜ್ಞಾನ್) ನಲ್ಲಿರುವ ಲೇಸರ್ ಇಂಡ್ಯೂಸ್ ಬ್ರೇಕ್ಡೌನ್ ಸ್ಪೆಕ್ಟ್ರೋಸ್ಕೋಪ್ ಉಪಕರಣವು ಪತ್ತೆ ಮಾಡಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮಂಗಳವಾರ ತಿಳಿಸಿದೆ.
ನಿರೀಕ್ಷಿಸಿದಂತೆ, ಪ್ರಗ್ಯಾನ್ ರೋವರ್, ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಟೈಟಾನಿಯಂ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಆಮ್ಲಜನಕವನ್ನು ಪತ್ತೆ ಮಾಡಿದೆ ಎಂದು ಇಸ್ರೋ ಹೇಳಿದೆ.
ಲಿಬ್ (ಲೇಸರ್ ಇಂಡ್ಯೂಸ್ ಬ್ರೇಕ್‌ಡೌನ್ ಸ್ಪೆಕ್ರೋಸ್ಕೋಪ್) ಉಪಕರಣವನ್ನು ಬೆಂಗಳೂರಿನ ಎಲೆಕ್ಟ್- ಆಪ್ಟಿಕ್ಸ್ ಸಿಸ್ಟಮ್ ಪ್ರಯೋಗಾಲಯ ಅಭಿವೃದ್ಧಿಪಡಿಸಿತ್ತು.