ರಾಮನಗರ, ಸೆ. 22: ಹೆಚ್. ಗೊಲ್ಲಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗುರುವಾರ ಬೆಳಿಗ್ಗೆ ನೀರಿನ ತೊಟ್ಟಿಯ ಗೋಡೆ ಕುಸಿದು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತರನ್ನು ರಾಮನಗರದ ಹೊಸೂರು ಗೊಲ್ಲಳ್ಳಿಯ ಕೌಶಿಕ್ ಗೌಡ (12) ಎಂದು ಗುರುತಿಸಲಾಗಿದೆ.
ಗುರುವಾರ ಬೆಳಿಗ್ಗೆ ಐದು ಅಡಿ ಎತ್ತರವಿರುವ ನೀರಿನ ತೊಟ್ಟಿಯ ಬಳಿ ಕೌಶಿಕ್ ಮತ್ತು ಚರಣ್ ಇಬ್ಬರು ವಿದ್ಯಾರ್ಥಿಗಳು ಮುಖ ತೊಳೆಯುತ್ತಿದ್ದರು. ಈ ವೇಳೆ ಶಿಥಿಲಗೊಂಡಿದ್ದ ತೊಟ್ಟಿಯ ಗೋಡೆ ವಿದ್ಯಾರ್ಥಿಗಳ ಮೇಲೆ ಉರುಳಿದೆ.
ಉರುಳಿದ ಗೋಡೆಯ ಅವಶೇಷಗಳಡಿ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದ ಕೌಶಿಕ್ನನ್ನು ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದಿದ್ದಾನೆ.ನೀರಿನ ಪ್ರಮಾಣ ತಡೆಯಲಾಗದೇ ಗೋಡೆ ಕುಸಿದಿದೆ ಎಂದು ಹೇಳಲಾಗಿದೆ.