ರಾಮನಗರ,ಡಿ. 18 : ಬೆಳಗಿನ ಜಾವ ತೋಟಕ್ಕೆ ನೀರು ಬಿಡುಲು ಹೋದ ರೈತನನ್ನು ಕಾಡಾನೆಯೊಂದು ತುಳಿದು ಬಲಿ ಪಡೆದುಕೊಂಡಿರುವ ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನಿ ಹಳ್ಳಿಕೆರೆದೊಡ್ಡಿಯಲ್ಲಿ ನಡೆದಿದೆ.
ಮೃತರನ್ನು 64 ವರ್ಷದ ಉರ್ಫ್ ತಿಮ್ಮಪ್ಪ ಎಂದು ಗುರುತಿಸಲಾಗಿದೆ.
ಐದು ಗಂಟೆಗೆ ನೀರು ಬಿಡಲು ತೆರಳಿದ್ದ ತಂದೆ, ಇನ್ನೂ ಯಾಕೆ ಮನೆಗೆ ಬಂದಿಲ್ಲ ಎಂದು ತಿಮ್ಮಪ್ಪ ಅವರ ಮಗ ತೋಟಕ್ಕೆ ನೋಡಲು ಹೋದಾಗ ತೋಟದಲ್ಲಿ ಕಾಡಾನೆಯ ತುಳಿತಕ್ಕೆ ಒಳಗಾಗಿ ಸಾವನಪ್ಪಿದ ತಂದೆ ಶವ ಬಿದ್ದಿದೆ ಎನ್ನಲಾಗಿದೆ.