ಬೆಂಗಳೂರು, ಫೆ. 24: ಕರ್ನಾಟಕದ ಕ್ರಿಕೆಟ್ ತಂಡದ ಆಟಗಾರ ಪಂದ್ಯದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ. ಕರ್ನಾಟಕ ತಂಡದ ಆಟಗಾರ ಕೆ. ಹೊಯ್ಸಳ(34) ಮೃತರು.
ಆರ್.ಎಸ್.ಎ. ಕ್ರೀಡಾಂಗಣದಲ್ಲಿ ಆಡಿಟ್ ಮತ್ತು ಅಕೌಂಟ್ ಇಲಾಖೆಯ ದಕ್ಷಿಣ ವಲಯ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಹೊಯ್ಸಳ ಪ್ರತಿನಿಧಿಸುತ್ತಿದ್ದರು.
ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಮಣಿಸುವಲ್ಲಿ ಕರ್ನಾಟಕ ಯಶಸ್ವಿಯಾಗಿತ್ತು. ಈ ಸಂದರ್ಭ ತಂಡದೊಂದಿಗೆ ಸಂಭ್ರಮಾಚರಣೆ ಮಾಡಿದ್ದ ಹೊಯ್ಸಳಗೆ ಮೈದಾನದಲ್ಲೇ ಎದೆಯಲ್ಲಿ ನೋವು ಕಾಣಿಸಿಕೊಂಡು ಪ್ರಜ್ಞೆ ತಪ್ಪಿದ್ದಾರೆ. ಬಳಿಕ ಅವರನ್ನು ಆಂಬ್ಯುಲೆನ್ಸ್ ಮೂಲಕ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆಗೆ ತಲುಪುವಷ್ಟರಲೇ ಅವರು ಸಾವನ್ನಪ್ಪಿದ್ದಾರೆ.