ಬೆಂಗಳೂರು ಜೂ.22 : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಆರೋಪ ಎದುರಿಸುತ್ತಿರೋ ನಟ ದರ್ಶನ್ ಇದೀಗ ಜೈಲು ಸೇರಿದ್ದಾರೆ. ಆರೋಪಿ ದರ್ಶನ್, ವಿನಯ್, ಪ್ರದೋಶ್ ಹಾಗೂ ಧನರಾಜ್ ಸೇರಿ ನಾಲ್ವರಿಗೆ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಆದೇಶ ನೀಡಿದೆ. . ದರ್ಶನ್ ಸೇರಿದಂತೆ ನಾಲ್ವರಿಗೆ 13 ದಿನ ಅಂದರೆ ಜುಲೈ 4ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶಿಸಿದೆ. ಇದರೊಂದಿಗೆ ದರ್ಶನ್ 2ನೇ ಬಾರಿ ಪರಪ್ಪನ ಅಗ್ರಹಾರದಲ್ಲಿರುವ ಸೆಂಟ್ರಲ್ ಜೈಲು ಸೇರಿದ್ದಾರೆ. 13 ವರ್ಷಗಳ ಬಳಿಕ ದರ್ಶನ್ ಮತ್ತೊಮ್ಮೆ 13 ದಿನ ಜೈಲು ಸೇರಿದಂತಾಗಿದೆ.
ನ್ಯಾಯಾಂಗ ಬಂಧನದ ಆದೇಶ ಬಂದ ಕೂಡಲೆ ದರ್ಶನ್, ವಿನಯ್, ಪ್ರದೂಶ್, ಧನರಾಜ್ರನ್ನು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಯಿತು. ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಕೈದಿ ನಂಬರ್ 6106.ಪರಪ್ಪನ ಅಗ್ರಹಾರದ ಜೈಲಿನ ಮೂರನೇ ಬ್ಯಾರಕ್ನಲ್ಲಿ ದರ್ಶನ್ರನ್ನ ಇರಿಸಲಾಗಿದೆ
ರೇಣುಕಾ ಸ್ವಾಮಿ ಹತ್ಯೆ ಕೇಸ್ಗೆ ಸಂಬಂಧಿಸಿದ ಆರೋಪಿಗಳಾದ ಪವಿತ್ರಾ ಗೌಡ ಹಾಗೂ ಇತರೆ ಆರೋಪಿಗಳಿಗೆ ಜೂನ್ 20 ರಂದು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಅಂದರೆ, ಜುಲೈ 4 ರವರೆಗೆ, ಇಂದು (ಜೂನ್ 22) ದರ್ಶನ್ ಮತ್ತು ಮೂವರಿಗೆ ಜುಲೈ 4 ರವರೆ ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.