ನಿಂತಿಕಲ್ಲು, ಸೆ.. 2 : ನಿಂತಿಕಲ್ಲುವಿನಲ್ಲಿ ನಮ್ಮ ಶಾಖೆಯ ಉದ್ಘಾಟನೆ ಆಗಿರುವುದು ನನಗೆ ಸಂತಸ ತಂದಿದೆ. ಪಾರದರ್ಶಕ ಆಡಳಿತ ವ್ಯವಸ್ಥೆ ಹಾಗೂ ಪ್ರಾಮಾಣಿಕ ಪ್ರಯತ್ನದಿಂದ ಸಂಸ್ಥೆಯು ಯಶಸ್ಸಿಯಾಗಿ ಬೆಳೆಯಲು ಸಾಧ್ಯ. ಗ್ರಾಹಕರು ಸಹಕಾರಿಯ ಜೀವಾಳ, ಮಾನವೀಯ ಮೌಲ್ಯ ಬಹಳಷ್ಟು ಶ್ರೇಷ್ಟವಾದುದು. ಸೇವೆ, ಸಹಕಾರ ಸಂಸ್ಥೆಯ ಮೂಲ ಉದ್ದೇಶವಾಗಿಸಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಅವರು ಆ.30ರಂದು ನಿಂತಿಕಲ್ಲಿನ ಸಾಧನಾ ಸಹಾಕಾರ ಸೌಧದಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 21ನೇ ಶಾಖೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ನಿರ್ದೇಶಕರಾದ ಭಾರತಿ ಜಿ. ಭಟ್ ರವರು ಮಾತನಾಡಿ ಗ್ರಾಮೀಣ ಜನರ ಸೇವೆಗಾಗಿ ಒಡಿಯೂರು ವಿವಿಧೋ ದೇಶ ಸಹಕಾರಿ ಸಂಸ್ಥೆಯು ಹುಟ್ಟಿಕೊಂಡಿದೆ. ಮಾನವೀಯ ಮೌಲ್ಯ ತುಂಬಿದ ಸಂಸ್ಥೆ ಇದಾಗಿದೆ ಎಂದು ಅವರು ಹೇಳಿದರು.
ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷರಾದ ಸಹಕಾರ ರತ್ನ ಎ. ಸುರೇಶ್ ರೈ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕೇರ್ಪಡ ಶ್ರೀ ಮಹಿಷಾಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ವಸಂತ ನಡುಬೈಲ್, ಮುರುಳ್ಳ ಗ್ರಾ.ಪಂ.ಅಧ್ಯಕ್ಷರಾದ ವನಿತಾ ಸುವರ್ಣ ಬಾಮೂಲೆ, ಮುರು – ಎಣ್ಣೂರು ಪ್ರಾಕೃತಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಂತಿಕಲ್ಲು ಇದರ ಅಧ್ಯಕ್ಷರಾದ ಕುಸುಮಾವತಿ ರ ಕೆ.ಜಿ. ಎಣ್ಣೂರು ಗುತ್ತು, ಎಣ್ಣೂರು ಕೋಟಿಚೆನ್ನಯ ನಗರ ಶ್ರೀ ಸೀತಾ-ರಾಮಚಂದ್ರ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ರಘುನಾಥ ರೈ ಕೆ.ಎಸ್. ಕಟ್ಟಬೀಡು, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪಿ.ಆರ್.ಒ. ಮಾತೇಶ್ ಭಂಡಾರಿ, ಶ್ರೀ ಗುರುದೇವ ಸೇವಾಬಳಗ ಮುರುಳ್ಯ – ಎಣ್ಣೂರು ವಲಯ ಅಧ್ಯಕ್ಷರಾದ ಮಹಾಬಲ ರೈ ಎಂ ಕೋಡೋಳು, ಸಹಕಾರಿಯ ಮುಖ್ಯ ಕಾರ್ಯನಿರ್ವಯಣಾಧಿಕಾರಿ ದಯಾನಂದ ಶೆಟ್ಟಿ, ಬಾಕ್ರಬೈಲು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.