ಮಂಗಳೂರು, ಸೆ.19: ದ.ಕ. ಜಿಲ್ಲಾ ವೈನ್ ಮರ್ಚೆಂಟ್ ಅಸೋಸಿಯೇಶನ್ ನ ಸ್ವಂತ ಕಚೇರಿಯು ನಗರದ ಕೊಟ್ಟಾರಚೌಕಿಯ ಉದ್ಧವ್ ಸ್ಕ್ವೇರ್ ನ ಎರಡನೇ ಮಹಡಿಯಲ್ಲಿ ಸೋಮವಾರ ಉದ್ಘಾಟನೆಗೊಂಡಿತು.
ಅಸೋಸಿಯೇಶನ್ ನ ಕಚೇರಿ ಉದ್ಘಾಟಿಸಿದ ಎಜೆ ಸಮೂಹ ಸಂಸ್ಥೆಗಳ ಚೇರ್ಮನ್ ಡಾ|ಎ.ಜೆ.ಶೆಟ್ಟಿ ಮಾತನಾಡಿ, ವೈನ್ ಮರ್ಚೆಂಟ್ ಅಸೋಸಿಯೇಶನ್ ಇಲ್ಲದ ಕಾಲದಲ್ಲಿ ಕೆಲಸ ಕಾರ್ಯಗಳಿಗೆ ಪರದಾಡಬೇಕಾಗಿತ್ತು. ಆದರೆ ಇಂದು ಅಸೋಸಿಯೇಶನ್ ಮೂಲಕ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತವೆ ಎಂದರು.
ಕ್ವಾಲಿಟಿ ಗ್ರೂಪ್ಸ್ ಆಫ್ ಹೊಟೇಲ್ ಇದರ ಎಂ ಡಿ ಡಾ| ಎ. ಸದಾನಂದ ಶೆಟ್ಟಿ ಮಾತನಾಡಿ, ಮದ್ಯ ವ್ಯಾಪಾರ ಹಲವಾರು ಸವಾಲುಗಳನ್ನು ಒಳಗೊಂಡಿದೆ. ಮುಂದಿನ ದಿನಗಳಲ್ಲಿ ಅಸೋಸಿಯೇಶನ್ ಮೂಲಕ ಸಂಘಟಿತರಾಗಿ ಕೆಲಸ ಮಾಡೋಣ ಎಂದು ಹೇಳಿದರು.
ಎಂ ಆರ್ ಜಿ ಸಮೂಹ ಸಂಸ್ಥೆಗಳ ಚೇರ್ಮನ್ ಡಾ| ಕೆ. ಪ್ರಕಾಶ್ ಶೆಟ್ಟಿ ಮಾತನಾಡಿ, ಹೊಟೇಲ್ ಮದ್ಯ ವ್ಯಾಪಾರದ ಮೂಲಕ ಬಹಳ ಮಂದಿಗೆ ಉದ್ಯೋಗ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದರು.
ಸಾಯಿ ಪ್ಯಾಲೆಸ್ ಸಮೂಹ ಹೊಟೇಲ್ನ ವ್ಯವಸ್ಥಾಪಕ ನಿರ್ದೇಶಕ ರವಿ ಸುಂದರ್ ಶೆಟ್ಟಿ,ಕರ್ನಾಟಕ ರಾಜ್ಯ ವೈನ್ ಮರ್ಚೆಂಟ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಬಿ. ಗೋವಿಂದ ರಾಜ್ ಹೆಗ್ಡೆ ಉಡುಪಿ, ಸುವರ್ಣ ಸಮೂಹ ಸಂಸ್ಥೆಗಳ ಚೇರ್ಮನ್ ಡಾ| ಉದಯ್ಚಂದ್ರ ಡಿ. ಸುವರ್ಣ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಗಣ್ಯರನ್ನು ಹಾಗೂ ವಿಶೇಷ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸಮ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ತಾಲೂಕು ಅಧ್ಯಕ್ಷ ಕೆ.ಟಿ. ಸುವರ್ಣ, ಅಸೋಸಿಯೇಶನ್ ನ ಪ್ರಧಾನ ಕಾರ್ಯದರ್ಶಿ ಸಿ.ಎನ್. ಅಪ್ಪಚ್ಚು ಅಸೋಸಿಯೇಶನ್ ಉಪಾಧ್ಯಕ್ಷ ವಿನೋದ್ ಪುತ್ತೂರು,ಕೋಶಾಧಿಕಾರಿ ಚಂದ್ರನಾಥ ಅತ್ತಾವರ, ಕಾರ್ಯದರ್ಶಿ ಓಂಪ್ರಸಾದ್ ಬಾರ್ದಿಲ, ಮೊದಲಾದವರು ಉಪಸ್ಥಿತರಿದ್ದರು.
ಅಸೋಸಿಯೇಶನ್ ಅಧ್ಯಕ್ಷ ಎಂ. ಗಣೇಶ್ ಶೆಟ್ಟಿ ಸ್ವಾಗತಿಸಿ,ಉಪಾಧ್ಯಕ್ಷ ಜೆ. ಲೂವಿಸ್ ಪಿಂಟೊ ಪ್ರಸ್ತಾವಿಸಿ, ನಾರಾಯಣ ಪಿ.ಎಂ. ವಂದಿಸಿದರು.