ಬೆಂಗಳೂರು,ಅ.05 : Tv9 ಕನ್ನಡ ಆಯೋಜಿಸಿರುವ ಲೈಫ್ ಸ್ಟೈಲ್ ಆಟೋ ಮೊಬೈಲ್ & ಫರ್ನಿಚರ್ ಎಕ್ಸ್ಪೋಗೆ ಈಗಾಗಲೇ ಚಾಲನೆ ಸಿಕ್ಕಿದೆ. 2023ರಲ್ಲಿ ಭರ್ಜರಿಯಾಗಿ ಸಕ್ಸಸ್ ಕಂಡು ಒಳ್ಳೆಯ ಪ್ರತಿಕ್ರಿಯೆ ಪಡೆದಿದ್ದ ಲೈಫ್ ಸ್ಟೈಲ್ ಆಟೋ ಮೊಬೈಲ್ ಫರ್ನಿಚರ್ ಎಕ್ಸ್ಪೋ ಈಗ ಮತ್ತೊಮ್ಮೆ ನಡೆಯುತ್ತಿದ್ದು, ಸಲಗ ಸುಂದರಿ ನಟಿ ಸಂಜನಾ ಆನಂದ್ ಮತ್ತು ನಟ ಅನಿರುದ್ಧ್ ಉದ್ಘಾಟನೆ ಮಾಡುವ ಮೂಲಕ ಎಕ್ಸ್ಪೋಗೆ ಚಾಲನೆ ನೀಡಿದ್ದಾರೆ.
ಜನಸಾಮಾನ್ಯರಿಗೆ ಅನುಕೂಲ ವಾಗುವಂತಹ ಮತ್ತು ಸಾಮಾಜಿಕ ಕೆಲಸವನ್ನು ಮಾಡುತ್ತಿರುವ ಟಿವಿ9 ಎಕ್ಸ್ಪೋಗೆ, ರಾಯಲ್ ಸಿನಿಮಾ ಸೌಂಡ್ ಮಾಡುತ್ತಿರುವ ಹೊತ್ತಲ್ಲೆ ನಟಿ ಸಂಜನಾ ಹಾಗೂ ನಟ ವಿರಾಟ್ ಒಟ್ಟಿಗೆ ಬಂದು ವಿಸಿಟ್ ಕೊಟ್ಟಿದ್ದು,ನ್ಯೂ ಮಾಡೆಲ್ ಕಾರ್ ಗಳನ್ನ ಅನ್ ವೇಲ್ ಮಾಡಿದ್ದಾರೆ.
ಗ್ರಾಹಕರಿಗೆ ಬೇಕಾರಗಿರುವ ಅಷ್ಟು ವಸ್ತುಗಳು, ಕಾರುಗಳು ಒಂದೇ ಸೂರಿನಡಿ ಲಭ್ಯವಾಗ್ತಿದೆ.. ಅಷ್ಟೇ ಅಲ್ಲ ತ್ರಿಪುರ ವಾಸಿನಿಯಲ್ಲಿ ಪಾರ್ಕಿಂಗ್ಗೆ ಕೂಡ ವ್ಯವಸ್ಥೆ ಮಾಡಲಾಗಿದೆ. ಒಂದು ದಿನ ಪೂರೈಸಿರುವ ಎಕ್ಸ್ಪೋ, ಇನ್ನೂ 5,6 ರಂದು ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಇರುತ್ತದೆ. ತಾವುಗಳು ದಸರಾ ಸಂಭ್ರಮಕ್ಕೆ ಮನೆಗೆ ಹೊಸ ವಸ್ತುಗಳ ಖರೀದಿ ಮಾಡೋ ಯೋಚನೆ ಇದ್ರೆ.Tv9 ಕನ್ನಡ ಆಯೋಜಿಸಿರುವ ಲೈಫ್ ಸ್ಟೈಲ್ ಆಟೋ ಮೊಬೈಲ್ & ಫರ್ನಿಚರ್ ಎಕ್ಸ್ಪೋಗೆ ಒಮ್ಮೆ ಭೇಟಿ ನೀಡಿ ಬೇಕಾಗುವ ವಸ್ತುಗಳನ್ನು ಖರೀದಿಸಬಹುದು.