ಮಂಗಳೂರು, ನ.23 :ಮಿಜ್ ಕ್ಲಾಸಿಕ್ ಕರಾವಳಿ ಬಾಡಿಬಿಲ್ಡಿಂಗ್ ಮತ್ತು ಫಿಟ್ನೆಸ್ ಎಕ್ಸ್ಪೋ ನ.24ರಂದು ಅಪರಾಹ್ನ 3ರಿಂದ ರಾತ್ರಿ 10ರವರೆಗೆ ನಗರದ ಫಿಜಾ ಬೈ ನೆಕ್ಸಸ್ ಮಾಲ್ನ ಹೊರಾಂಗಣದಲ್ಲಿ ನಡೆಯಲಿದೆ ಎಂದು ರಾಮೀಝ್ ಮಿಝ್ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಡಾ.ಅಬ್ದುಲ್ ಶಕೀಲ್ ಅವರ ಸಹಭಾಗಿತ್ವದಲ್ಲಿ , ಕನ್ನಡ ಹೆಲ್ತ್ ಆ್ಯಂಡ್ ಫಿಟ್ನೆಸ್, ತುಳು ಫ್ಯಾಶನ್ ಆ್ಯಂಡ್ ಫಿಟ್ನೆಸ್, ಅಬೂಬಕ್ಕರ್ ಅಶ್ರಫ್ ಅವರ ನೆರವಿನಿಂದ ಚಾಂಪಿಯನ್ ಶಿಪ್ ನಡೆಯಲಿದೆ. ಉಡುಪಿ, ದ.ಕ., ಕೊಡಗು, ಕಾಸರಗೋಡು ಸೇರಿದಂತೆ ನಾಲ್ಕು ಜಿಲ್ಲೆಗಳಿಗೆ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಿಸ್ಟರ್ ಏಷ್ಯಾ ವಿಜೇತ ರಾಮೀಝ್ ಮಿಝ್, ಒಲಿಂಪಿಕ್ ಸ್ಪೋರ್ಟ್ನ ನಿರ್ವಹಣಾ ನಿರ್ದೇಶಕ ಮುಹಮ್ಮದ್ ಶರೀಫ್, ಸಂಘಟಕ ತುಫೈಲ್, ಗೌಜಿ ಇವೆಂಟ್ಸ್ ಮಾಲಕ ಅಭಿಷೇಕ್ ಉಪಸ್ಥಿತರಿದ್ದರು.