ಬೆಂಗಳೂರು, ಡಿ. 26 : 7ಜಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ನಟ ಆದಿ ಪಿನಿಶೆಟ್ಟಿ ಅಭಿನಯದ ಚಿತ್ರ ‘ಶಬ್ದ’ ಫೆಬ್ರವರಿ 28 ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. ಈ ಚಿತ್ರ ಹಾರರ್-ಥ್ರಿಲ್ಲರ್ ಆಗಿದ್ದು, ಅರಿವಳಗನ್ ವೆಂಕಟಾಚಲಂ ನಿರ್ದೇಶಿಸಿದ್ದಾರೆ.
‘ಶಬ್ದ’ ಚಿತ್ರದಲ್ಲಿ ಲಕ್ಷ್ಮಿ ಮೆನನ್, ಲೈಲಾ ಮತ್ತು ಸಿಮ್ರನ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎಸ್ ಎಸ್ ತಮನ್ ಸಂಗೀತ ನಿರ್ದೇಶನ, ಅರುಣ್ ಪದ್ಮನಾಭನ್ ಛಾಯಾಗ್ರಹಣ ಮತ್ತು ವಿಜೆ ಸಾಬು ಜೋಸೆಫ್ ಅವರ ಸಂಕಲನ ಈ ಚಿತ್ರಕ್ಕಿದೆ.
ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರವನ್ನು ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿತ್ರದ ಆಡಿಯೋ ಮತ್ತು ಟ್ರೈಲರ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.