ಮಂಗಳೂರು, ಆ.2 : ಅಂತಾರಾಷ್ಟ್ರೀಯ ಲಯನ್ಸ್ ಜಿಲ್ಲೆ 317-ಡಿ’ ಯ 2024-25ರ ಸಾಲಿನ ಸಂಪುಟ ಪದಗ್ರಹಣ ಸಮಾರಂಭ ‘ಕಾವೇರಿ’ ಆಗಸ್ಟ್.3ರಂದು ಸಂಜೆ 3 ಗಂಟೆಗೆ ಎಕ್ಕೂರಿನ ಇಂಡಿಯಾನಾ ಕನ್ವೆನ್ಯನ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಲಯನ್ಸ್ ಜಿಲ್ಲೆ ಮಂಗಳೂರು 317-ಡಿಯ ಗವರ್ನರ್ ಬಿ.ಎಂ.ಭಾರತಿ ತಿಳಿಸಿದರು.
ಗುರುವಾರ ಪತ್ರಿಕಾಭವನ ದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅಂತಾರಾಷ್ಟ್ರೀಯ ಎಲ್.ಸಿ.ಐ.ಎಫ್.ನ ಟ್ರಸ್ಟಿ ಅರುಣಾ ಅಬೆ ಒಸ್ವಾಲ್ ಭಾಗವಹಿಸಲಿದ್ದಾರೆ. ಎಲ್.ಸಿ.ಐ.ಎಫ್. ಕ್ಷೇತ್ರ ನಾಯಕ ವಂಶಿದ್ ಬಾಬು ಕೆ., ಅಂತಾರಾಷ್ಟ್ರೀಯ ಮಾಜಿ ನಿರ್ದೇಶಕ ವಿ.ವಿ. ಕೃಷ್ಣ ರೆಡ್ಡಿ, ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಡಾ|ಎನ್. ಕೃಷ್ಣ ಗೌಡ, ನಿಕಟಪೂರ್ವ ರಾಜ್ಯಪಾಲ ಡಾ| ಮೆಲ್ವಿನ್ ಡಿ’ಸೋಜಾ, ಪ್ರಥಮ
ಉಪಗವರ್ನರ್ಕುಡ್ಲಿ ಅರವಿಂದ್ ಶೆಣೈ, ದ್ವಿತೀಯ ಉಪಗವರ್ನರ್ ಎಚ್.ಎಂ. ತಾರಾನಾಥ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸೇವಾ ಕಾರ್ಯಕ್ರಮದ ಅಂಗವಾಗಿ ಮಂಗಳೂರಿನ ವೆಬ್ಲಾಕ್‌ನಲ್ಲಿ ಹೊರರೋಗಿಗಳ ಸಂಬಂಧಿಕರಿಗೆ ಪ್ರತಿದಿನ ಉಚಿತ ಊಟದ ವ್ಯವಸ್ಥೆ ನೀಡುತ್ತಿರುವ ಎಂ-ಫ್ರೆಂಡ್ಸ್ ಸಂಸ್ಥೆಗೆ 25 ಲಕ್ಷ ರೂ. ಮೌಲ್ಯದ ಮೊಬೈಲ್ ಕಿಚನ್ ವಾಹನವನ್ನು ಆಗಸ್ಟ್.3ರಂದು ಬೆಳಗ್ಗೆ 11ಕ್ಕೆ ಹಸ್ತಾಂತರಿಸಲಾಗುವುದು. ಜತೆಗೆ 50 ಲಕ್ಷರೂ. ದೇಣಿಗೆ ಚೆಕ್ ನ್ನು ಅಂತಾರಾಷ್ಟ್ರೀಯ ನಿರ್ದೇಶಕರಿಗೆ ನೀಡಲಾಗುವುದು. ಕಾರ್ಯಕ್ರಮದಲ್ಲಿ 115 ಕ್ಲಬ್‌ಗಳಿಂದ ಸುಮಾರು ಒಂದು ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಪುಟ . ಕಾರ್ಯದರ್ಶಿ ಗೀತಾ ಆರ್ ರಾವ್, ಜಿಲ್ಲಾ ಪಿಆರ್ಒ ಶ್ರೀನಿವಾಸ್ ಪೂಜಾರಿ,
ಲಯನ್ಸ್ ಪದಾಧಿಕಾರಿಗಳಾದ ಹರೀಶ್ ಆಳ್ವ ವಿಜಯ ವಿಷ್ಣು ಮಯ್ಯ, ಮನೋರಂಜನ್ ಕೆ.ಆರ್. ಮತ್ತಿತರರು ಉಪಸ್ಥಿತರಿದ್ದರು.