ಉಡುಪಿ, ಅ.23: ನದಿಗೆ ಸ್ನಾನಕ್ಕೆ ಹೋದ ಇಬ್ಬರು ನೀರು ಪಾಲಾದ ಘಟನೆ ಹೆಬ್ರಿ ಸಮೀಪದ ಕಬ್ಬಿನಾಲೆ ಮತ್ತಾವು ಎಂಬಲ್ಲಿ ನಡೆದಿದೆ.
ಮೃತರನ್ನು ಕರ್ಜೆ ನಿವಾಸಿ ಉಮೇಶ್ ಶೆಟ್ಟಿ (48) ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿ ಚಾರ ಹುರ್ತುರ್ಕೆ ನಿವಾಸಿ ಪ್ರಸ್ತುತ್ ಹೆಗ್ಡೆ (21) ಎಂದು ಗುರುತಿಸಲಾಗಿದೆ.
ಶನಿವಾರ ಸಂಜೆ 3 ಗಂಟೆಗೆ ಸ್ನಾನಕ್ಕೆ ಹೋದವರು ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2 Comments
Pingback: peaceful piano music
Pingback: coffee shop ambience