ಮಂಗಳೂರು, ಜ. 10 : ಒಡಿಯೂರು ಶ್ರೀ’ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 23ನೇ ಮಂಗಳೂರು ಸೆಂಟ್ರಲ್ ಮಾರ್ಕೆಟ್ ಶಾಖೆಯು ಮಂಗಳೂರು ಸೆಂಟ್ರಲ್ ಮಾರ್ಕೆಟ್ ರಸ್ತೆಯಲ್ಲಿರುವ ರಾಸಿಕ್ ಚೇಂಬರ್ ನ ಒಂದನೇ ಮಹಡಿಯಲ್ಲಿ ಜ.3,ಶುಕ್ರವಾರ ಉದ್ಘಾಟನೆಗೊಂಡಿತು.
ನೂತನ ಶಾಖೆ ಉದ್ಘಾಟಿಸಿ ಆಶೀರ್ವಚನ ನೀಡಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಇದರ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು, ಸಹಕಾರಿ ಸಂಘಗಳು ನಮ್ಮ ಬದುಕು ರೂಪಿಸಲು ಪೂರಕವಾಗಿದೆ. ಸಮಾಜದ ಹಿತಕ್ಕಾಗಿ ಸಹಕಾರಿ ಸಂಘವನ್ನು ಆರಂಭಿಸಲಾಗಿದೆ. ಸಮಾಜ ಮುಖಿಯಾಗಿರುವ ಕಾರಣದಿಂದ ಬೆಳವಣಿಗೆ ಸಾಧ್ಯವಾಗಿದೆ. ಗ್ರಾಮ ವಿಕಾಸದೊಂದಿಗೆ ಆರಂಭ ವಾಗಿರುವ ಸಂಸ್ಥೆಯ ಏಳಿಗೆಗಾಗಿ ಆಡಳಿತ ವರ್ಗ ಪ್ರಾಮಾಣಿಕ ಸೇವೆ ನೀಡುತ್ತಿದೆ. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ತಂಡ ಹೆಚ್ಚು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದರು.
ಮೇಯರ್ ಮನೋಜ್ ಕುಮಾರ್ ಮಾತನಾಡಿ,ಮಂಗಳೂರಿನ ಹೃದಯ ಭಾಗದಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಗತ್ಯವಿತ್ತು. ಸ್ವಾಮೀಜಿಗಳ ಚಿಂತನೆಯಂತೆ ಶಾಖೆ ಆರಂಭವಾಗಿದೆ. ಸಂಘದ ಮೂಲಕ ಗ್ರಾಹಕರಿಗೆ ಉತ್ತ,ಮ ಸೇವೆಯೊಂದಿಗೆ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಶಾಖೆಗಳು ಆರಂಭಗೊಳ್ಳಲಿ ಎಂದರು.
ಸಾನ್ವಿ ಶ್ರೀ ಮಾತಾನಂದಮಯೀ ಸಾನ್ನಿಧ್ಯ ವಹಿಸಿ ಶುಭಹಾರೈಸಿದರು. ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿದರು. ಒಡಿಯೂರು ಸಹಕಾರಿ ಸಂಘದ ಅಧ್ಯಕ್ಷ ಎ. ಸುರೇಶ್ ರೈ ಪ್ರಸ್ತಾವಿಸಿದರು.
ಕಾರ್ಯಕ್ರಮದಲ್ಲಿ ಡೊಂಗರಕೇರಿಶ್ರೀ ವೆಂಕಟರಮಣ ದೇವಸ್ಥಾನದ ಮಾಜಿ ಮೊಕ್ತಸರ ವರದರಾಯ ನಾಗ್ವಿಕರ್, ಉದ್ಯಮಿಗಳಾದ ಕಿರಣ್ ಸಾಂಗ್ವಿ, ಬಂಟ್ವಾಳ ರಘುನಾಥ ಸೋಮಯಾಜಿ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಯೋಜನ ನಿರ್ದೇಶಕ ಕಿರಣ್ ಯು., ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕಿ ಭಾರತಿ ಜಿ. ಭಟ್, ದ.ಕ. ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿ ಮಂಗಳೂರು ಅಧ್ಯಕ್ಷ ಭಾಸ್ಕರ್ ದೇವಸ್ಯ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಜಿಲ್ಲಾ ಸಂಯೋಜಕ ವಿಜಯ್ ಬಿ.ಎಸ್., ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲ್, ಶಾಖಾ ವ್ಯವಸ್ಥಾಪಕಿ ಕಾವ್ಯಾ ಶೆಟ್ಟಿ ಉಪಸ್ಥಿತರಿದ್ದರು. ನಿರ್ದೇಶಕ ಗಣೇಶ್ ಅತ್ತಾವರ ವಂದಿಸಿ,ಪತ್ರಕರ್ತ ಲೋಕೇಶ್ ರೈ ನಿರೂಪಿಸಿದರು.