ಉಳ್ಳಾಲ, ಮಾ. 05: ದೇರಳಕಟ್ಟೆಯ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಯೆನೆಪೋಯ ಮೆಡಿಕಲ್ ಕಾಲೇಜಿನ ರಜತ ಮಹೋತ್ಸವದ ಲಾಂಛನವನ್ನು ಯೆನೆಪೊಯ ಪರಿಗಣಿತ ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ವೈ.ಅಬ್ದುಲ್ಲ ಕುಂಞಿ ಅವರು ಸೋಮವಾರ ಅನಾವರಣಗೊಳಿಸಿದರು.
ಬಳಿಕ ಮಾತನಾಡಿದ ಅವರು,ಯೆನೆಪೋಯ ಮೆಡಿಕಲ್ ಕಾಲೇಜು 1999 ರಲ್ಲಿ ಸ್ಥಾಪನೆಯಾಗಿ,ಇದೀಗ 2024 ರಲ್ಲಿ ತನ್ನ ರಜತ ಮಹೋತ್ಸವ ವರ್ಷಾಚರಣೆ ನಡೆಸಲಿದೆ.ಮಂಗಳೂರಿನ ದೇರಳಕಟ್ಟೆಯ ಯೆನೆಪೊಯ ಪರಿಗಣಿತವ ವಿಶ್ವವಿದ್ಯಾ ಲಯದ ಘಟಕ ಸಂಸ್ಥೆಗಳಲ್ಲಿ ಒಂದಾದ ಯೆನೆಪೊಯ ವೈದ್ಯಕೀಯ ಕಾಲೇಜು ತನ್ನ 25ನೇ ವರ್ಷದ ಸಂದರ್ಭದಲ್ಲಿ ಬೆಳ್ಳಿಹಬ್ಬದ ಆಚರಣೆಯನ್ನು ಪ್ರಾರಂಭಿಸಲು ಸಂಸ್ಥೆ ವಿವಿಧ ಪಾಲುದಾ ರರಿಗಾಗಿ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಬೆಳ್ಳಿ ಹಬ್ಬದ ಪ್ರಯುಕ್ತ ನಡೆಯುವ ಕಾರ್ಯಕ್ರಮ ಗಳು ಯಶಸ್ವಿಯಾಗಲಿ ಎಂದು ಡಾ. ವೈ.ಅಬ್ದುಲ್ಲಾ ಕುಂಞ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಯೆನೆಪೊಯ ವಿಶ್ವ ವಿದ್ಯಾನಿಲಯದ ಕುಲಸಚಿವ ಡಾ.ಎಂ. ಡಾ.ಗಂಗಾಧರ ಸೋಮಯಾಜಿ, ಯೆನೆಪೊಯ ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಡಾ.ಎಂ. ವಿಜಯ ಕುಮಾರ್ ಡಾ.ಅಖ್ತರ್ ಹುಸೈನ್, ಯೆನೆಪೊಯ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಸ್ ಮೂಸಬ್ಬ,ಯೆನೆಪೊಯ ವೈದ್ಯಕೀಯ ಕಾಲೇಜಿನ ಪೂರ್ವ ಪ್ರಾಂಶುಪಾಲರಾದ ಡಾ.ಗುಕಾಮ್ ಜಿಲಾನಿ ಮೊದಲಾದವರು ಉಪಸ್ಥಿತರಿದ್ದರು.