ಮಂಗಳೂರು,ಜು.16: ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಇಎನ್ಟಿ, ತಲೆ ಮತ್ತು ಕುತ್ತಿಗೆ ಶಸ್ತ್ರಚಿಕಿತ್ಸಾ ವಿಭಾಗದ ವತಿಯಿಂದ -ಇಂಡಿಯನ್ ಅಕಾಡೆಮಿ ಆಫ್ ಓಟೋರಿಗೋಲಾರಿಂಗೋಲಜಿ, ತಲೆ ಮತ್ತು ಕುತ್ತಿಗೆ ಶಸ್ತ್ರಚಿಕಿತ್ಸೆಯ 10ನೇ ರಾಷ್ಟ್ರೀಯ ಸಮ್ಮೇಳನ ಡಾ| ಟಿಎಂಎ ಪೈ ಇಂಟರ್ನ್ಯಾಷನಲ್ ಕನ್ವೆನ್ಸನ್ ಸೆಂಟರ್ನಲ್ಲಿ ಆ..8,ಗುರುವಾರ ನಡೆಯಿತು.
ಐಎಒಎಚ್ ಎನ್ಎಸ್ 2024 ಮಂಗಳೂರು ಸಮ್ಮೇಳನವನ್ನು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನ ಸಹ ಕುಲಾಧಿಪತಿ ಡಾ| ಎಚ್. ಎಸ್. ಬಲ್ಲಾಳ್ ಅವರು ಉದ್ಘಾಟಿಸಿದರು. ನಂತರ ಅವರು ಮಾತನಾಡಿ, ವೈದ್ಯರು, ರೋಗಿಗಳಿಗೆ ಚಿಕಿತ್ಸೆನೀಡುವವಿಧಾನದಲ್ಲೂ ಅಧುನಿಕ ಆವಿಷ್ಕಾರಗಳನ್ನು ಅರಿತುಕೊಳ್ಳಬೇಕು. ಆ ನಿಟ್ಟಿನಲ್ಲಿ ಕೆಎಂಸಿ ವೈದ್ಯ ಕೀಯ ಕಾಲೇಜು ನಿರಂತರವಾಗಿ ವಿವಿಧ ವಿಭಾಗ, ವಿಚಾರಗಳಿಗೆ ಸಂಬಂಧಿಸಿದ ಸಮ್ಮೇಳನ, ಸಿಎಂಇ ಗಳನ್ನು ಆಯೋಜಿಸಿ ತಜ್ಞರನ್ನು ಕರೆಸಿ ಅವರಿಂದ ಉಪನ್ಯಾಸಗಳನ್ನು ನೀಡುತ್ತಿದೆ ಎಂದರು.
ಡಾ| ಮೋಹನ್ ಕಾಮೇಶ್ವರಂ ಮಾತನಾಡಿ, ಅಕಾಡೆಮಿ ಹುಟ್ಟು ಹಾಕಿದ ಉದ್ದೇಶಗಳಿಗೆ ಅನುಸಾರವಾಗಿ 10 ವರ್ಷ ಗಳಿಂದ ಕೆಲಸ ಮಾಡುತ್ತಿದ್ದು, ಯಶಸ್ವಿಯಾಗಿ ಕೆಲಸ ಮಾಡುತ್ತಿದೆ. ಓಟೋ ರಿನೋಲಾರಿಂಗೋಲಜಿ ಕ್ಷೇತ್ರಕ್ಕೆ ಬರುವ ಯುವ ಸಮುದಾಯಕ್ಕೆ ತರಬೇತಿ ನೀಡಿ ಅವರನ್ನು ಸಜ್ಜು ಗೊಳಿಸುವ ಕೆಲಸವನ್ನು ಮಾಡುತ್ತಿದೆ ಎಂದರು.
ಇಎನ್ಟಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಡಾ| ಇ.ವಿ.ರಮಣ್ ಅವರಿಗೆ ಗೌರವ ಫೆಲೋಶಿಫ್ ನೀಡಿ ಗೌರವಿಸಲಾಯಿತು.ಅಧ್ಯಕ್ಷ ಡಾ| ಸುನಿಲ್ ಕೊತ್ವಾಲ್, ಡೀನ್ ಡಾ| ನರೇಶ್ ಪಾಂಡವ್, ಕಾರ್ಯದರ್ಶಿ ಡಾ| ವಿಜಯ್ ಕೃಷ್ಣನ್, ಕೆಎಂಸಿ ಡೀನ್ ಡಾ| ಉಣ್ಣಿಕೃಷ್ಣನ್, ಕೆಎಂಸಿ ಮಂಗಳೂರು ಇಎನ್ಟಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ| ದೇವಿಪ್ರಸಾದ್ ಉಪಸ್ಥಿತರಿದ್ದರು.ಮಾಹೆ ಕುಲಪತಿ ಲೆಫ್ಟಿನೆಂಟ್ ಜನರಲ್ ಡಾ| ಎಂ.ಡಿ. ವೆಂಕಟೇಶ್ ಪ್ರಸ್ತಾವಿಸಿ ಸ್ವಾಗತಿಸಿದರು.