ಕಾಸರಗೋಡು, ಮೇ.19 : ಕಾರು ಮತ್ತು ಸ್ಕೂಟರ್ ಅಪಘಾತ ಸಂಭವಿಸಿ ದಂಪತಿ ಸಾವನ್ನಪ್ಪಿದಘಟನೆ ಬೇತೂರುಪಾರ ದಲ್ಲಿ ನಡೆದಿದೆ.
ಮೃತರನ್ನು ಬೇಡಡ್ಕದ ವಸ್ತ್ರ ಮಳಿಗೆ ಮಾಲಕ ಕೆ.ಕೆ ಕೃಷ್ಣನ್ ( 71) ಮತ್ತು ಪತ್ನಿ ಚಿತ್ರಕಲಾ ( 57) ಎಂದು ಗುರುತಿಸಲಾಗಿದೆ.
ಬೋವಿಕ್ಕಾನ – ಕುತ್ತಿ ಕೋಲ್ ರಸ್ತೆಯ ಬೇತೂರು ಪಾರ ಇಳಿಜಾರು ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಕಾರು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ನಡೆದಿದೆ. ಅಪಘಾತ ದಲ್ಲಿ ದಂಪತಿ ಕೆ.ಕೆ ಕೃಷ್ಣನ್ ಪತ್ನಿ ಚಿತ್ರಕಲಾ ಸಾವನ್ನಪ್ಪಿದ್ದಾರೆ.
ಬೇಡಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ .