ಮಂಗಳೂರು, ಜ. 25 : ಪಂಬದ ಸಮಾಜವು ಕರಾವಳಿಯ ದೈವರಾಧನೆ ಮೂಲ ಸಂಸ್ಕೃತಿಯನ್ನು ಉಳಿಸುವ ಜೊತೆಗೆ ಮುಂದಿನ ಪೀಳಿಗೆಗೆ ಆ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸವನ್ನು ಮಾಡುತ್ತಿದೆ. ಪಂಬದ ಸಮಾಜದ ಪರಂಪರೆ ಮತ್ತು ಸಂಸ್ಕೃತಿಯ ಬಗ್ಗೆ ಆಳವಾದ ಅಧ್ಯಯನ ನಡೆಸಬೇಕಾದರೆ ಪಂಬದರ ಅಧ್ಯಯನ ಪೀಠ ಸ್ಥಾಪಿಸಬೇಕಿದೆ. ಈ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡುವೆ ಎಂದು ರಾಜ್ಯ ವಿಧಾನ ಸಭೆ ಸ್ಪೀಕರ್ ಯು.ಟಿ. ಖಾದರ್ ಪಂಬದರ ಅಭ್ಯುದಯ ಯುವಜನ ಸೇವಾ ಟ್ರಸ್ಟ್ ಪಡುಪೆರಾರ, ತುಳುವ ಬೊಳ್ಳಿ ಪ್ರತಿಷ್ಠಾನ,ಪಂಬದರ ಯಾನೇ ದೈವಾ ದಿಗರ ಸಮಾಜ ಸಂಘ ವತಿಯಿಂದ ಪುರಭವನದಲ್ಲಿ ರವಿವಾರ ನಡೆದ ‘ಪಂಬದೆರೆನಾ ಸಮಾವೇಶ-ಸಿರಿಮುಡಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೇಮಾರು ಸಾಂದೀಪನಿ ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ದುರ್ಗಾದಾಸ್ ಶೆಟ್ಟಿ ಮಾವಂತೂರು ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕಟೀಲು ಶ್ರೀದುರ್ಗಾ ಪರಮೇಶ್ವರಿ ದೇಗುಲದ ಆರ್ಚಕರಾದ ಕಮಲಾ ದೇವಿ ಅಸ್ತ್ರಣ್ಣ ,ಅನಂತ ಪದ್ಮನಾಭ ಕ್ಷೇತ್ರದ ಕೃಷ್ಣರಾಜ್ ತಂತ್ರಿ, ಸಂಸದ ನಳಿನ್ ಕುಮಾರ್ ಕಟೀಲು, ಮೇಯರ್ ಸುಧೀರ್ ಶೆಟ್ಟಿ, ಕುಲಶೇಖರ ಧರ್ಮಶಾಸ್ತ್ರ ಮಂದಿರ ಟ್ರಸ್ಟ್ ನ ಅಧ್ಯಕ್ಷ ರಾಮ್ ಪ್ರಸಾದ್, ಅಬ್ಬಕ್ಕ ಉತ್ಸವ ಸಮಿತಿ ಮುಖ್ಯಸ್ಥರಾದ ದಿನಕರ್ ಉಳ್ಳಾಲ್,ತಿದ್ಯೆ ಕಂಬಳ ಸುತ್ತಿನ ಮುಖ್ಯಸ್ಥ ಭಾಸ್ಕರ್ ಶೆಟ್ಟಿ, ದಕ್ಷಿಣ ವಲಯದ ಡಿಪಿಎಸ್ ಟಿ ಎಸ್ ಅಶ್ವತ್ಥನಾರಾಯಣ,ಹಿರಿಯ ಅಂಚೆ ಅಧಿಕಾರಿ ಸುಧಾಕರ್ ಮಲ್ಯ, ಪಡ್ಯೋಡಿಗುತ್ತು ಶಿಶಿರ್ ಶೆಟ್ಟಿ ಪಂಬದರು ಮತ್ತಿತರರು ಉಪಸ್ಥಿತರಿದ್ದರು.