Close Menu
Navaloka Media News Mangalore| Kannada Online News PortalNavaloka Media News Mangalore| Kannada Online News Portal
    Our Picks

    ಬೆಳ್ತಂಗಡಿ: ಶಿರಾಡಿ ಘಾಟ್ ನಲ್ಲಿ ಕೆಎಸ್ಆರ್ಟಿಸಿ ರಾಜಹಂಸ ಬಸ್-ಕಾರು ಮುಖಾಮುಖಿ ಡಿಕ್ಕಿ: ಮೂವರು ಸಾವು

    March 13, 2026

    ಸುಳ್ಯ: ಕುಸಿದು ಬಿದ್ದು ಉಪನ್ಯಾಸಕ ಸಾವು

    March 12, 2026

    ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅತ್ತಾವರ 55ನೇ ವಾರ್ಡಿನ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆ

    March 11, 2026

    Subscribe to Updates

    Get the latest creative news from FooBar about art, design and business.

    What's Hot

    ಬೆಳ್ತಂಗಡಿ: ಶಿರಾಡಿ ಘಾಟ್ ನಲ್ಲಿ ಕೆಎಸ್ಆರ್ಟಿಸಿ ರಾಜಹಂಸ ಬಸ್-ಕಾರು ಮುಖಾಮುಖಿ ಡಿಕ್ಕಿ: ಮೂವರು ಸಾವು

    March 13, 2026

    ಸುಳ್ಯ: ಕುಸಿದು ಬಿದ್ದು ಉಪನ್ಯಾಸಕ ಸಾವು

    March 12, 2026

    ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅತ್ತಾವರ 55ನೇ ವಾರ್ಡಿನ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆ

    March 11, 2026
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    • Home
    • Local News
    • State News
    • National/International news
    • Film News
    • Contact Us
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    Home»Local News»ಮಂಗಳೂರು : ಗಣೇಶ ಹಬ್ಬದಲ್ಲಿ ಮಾರ್ಗಸೂಚಿಗಳನ್ನು ಪಾಲಿಸಲು ಜಿಲ್ಲಾಧಿಕಾರಿ ಸೂಚನೆ
    Local News

    ಮಂಗಳೂರು : ಗಣೇಶ ಹಬ್ಬದಲ್ಲಿ ಮಾರ್ಗಸೂಚಿಗಳನ್ನು ಪಾಲಿಸಲು ಜಿಲ್ಲಾಧಿಕಾರಿ ಸೂಚನೆ

    adminBy adminAugust 31, 2022
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter LinkedIn Pinterest Email
    Navaloka media news
    Navaloka media news

    ಮಂಗಳೂರು : ಸರ್ಕಾರ ಹಾಗೂ ರಾಜ್ಯ ಹೈಕೋರ್ಟ್ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸಿ ಈ ಬಾರಿಯ ಗಣೇಶ ಹಬ್ಬವನ್ನು ಸಂಭ್ರಮ ಹಾಗೂ ಸಡಗರಿದಂದ ಆಚರಿಸುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಜಿಲ್ಲೆಯ ಗಣೇಶೋತ್ಸವ ಸಮಿತಿಗಳ ಮುಖಂಡರಿಗೆ ಸಲಹೆ ನೀಡಿದ್ದಾರೆ.

    ಆ.26, ಶುಕ್ರವಾರ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಈ ಕುರಿತು ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿಯವರು ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸುವ ಸಮಿತಿಗಳು ಆಯಾ ವ್ಯಾಪ್ತಿಯ ಪೊಲೀಸ್ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್ಗಳಲ್ಲಿ ಅನುಮತಿ ಪಡೆಯಬೇಕು, ಈ ಸಂದರ್ಭದಲ್ಲಿ ಸೌಹಾರ್ದತೆ ಹಾಗೂ ಸಾಮಾಜಿಕ ಸ್ವಾಸ್ಥ್ಯ ಕದಡುವಂತಹ ಬರಹಗಳ ಬ್ಯಾನರ್ ಅಥವಾ ಫ್ಲೆಕ್ಸ್ಗಳನ್ನು ಅಳವಡಿಸಬಾರದು, ನಗರ ಸ್ಥಳೀಯ ಸಂಸ್ಥೆಗಳು ಅಥವಾ ಪೊಲೀಸ್ ಇಲಾಖೆಯ ಅನುಮತಿ ಪಡೆದು ಶುಭ ಕೋರುವ ಬ್ಯಾನರ್ ಅಥವಾ ಫ್ಲೆಕ್ಸ್ಗಳನ್ನು ಅಳವಡಿಸಿಕೊಳ್ಳಬಹುದಾಗಿದೆ, ಇದೀಗ ಮಳೆಗಾಲವಾದ ಕಾರಣ ಮಳೆ ಹಾಗೂ ಗಾಳಿಗೆ ಹಾನಿಯಾಗದಂತಹ ಪೆಂಡಾಲ್ಗಳನ್ನು ಹಾಕಬೇಕು, ಅಲ್ಲಿ ವಿದ್ಯುತ್ ಅವಘಡಗಳಾಗದಂತೆ ಎಚ್ಚರ ವಹಿಸಬೇಕು, ವಿದ್ಯುತ್ ಸಂಪರ್ಕ ಪಡೆಯಲು ತಾತ್ಕಾಲಿಕ ಅನುಮತಿ ಪಡೆಯಬೇಕು, ದೊಡ್ಡ ದೊಡ್ಡ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಸಮಿತಿಗಳು ಕಡ್ಡಾಯವಾಗಿ ಸಿಸಿಟಿವಿಯನ್ನು ಅಳವಡಿಸಿಕೊಳ್ಳಬೇಕು, ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು, ಆ ಪೆಂಡಾಲ್ಗಳಲ್ಲಿ ಯಾವುದೇ ರೀತಿಯ ಅವಘಡಗಳು ಆಗದಂತೆ ಎಚ್ಚರ ವಹಿಸಲು ತಮ್ಮ ಕಾರ್ಯಕರ್ತರನ್ನು ನಿಯೋಜಿಸುವಂತೆ ಅವರು ಸೂಚಿಸಿದರು.

    ಧ್ವನಿ ವರ್ಧಕಗಳನ್ನು ಬಳಸುವ ಮುನ್ನ ಸಂಬಂಧಪಟ್ಟವರಿಂದ ಅನುಮತಿ ಪಡೆಯಬೇಕು ಮತ್ತು ನ್ಯಾಯಾಲಯದ ಆದೇಶದಂತೆ ರಾತ್ರಿ ಹತ್ತು ಗಂಟೆಯ ನಂತರ ಧ್ವನಿ ವರ್ಧಕಗಳನ್ನು ಬಳಸಬಾರದು, ವಿದ್ಯುತ್ ಅಲಂಕಾರ, ಬೆಳಕಿನ ವ್ಯವಸ್ಥೆಯಲ್ಲಿ ಯಾವುದೇ ಲೋಪದೋಷಗಳಾಗದಂತೆ ಆಯೋಜಕರು ಗಮನ ಹರಿಸಬೇಕು. ವಿಸರ್ಜನೆ ಮೆರವಣಿಗೆಯಲ್ಲಿ ವಿದ್ಯುತ್ ತಂತಿಗಳು ಅಥವಾ ಕೇಬಲ್ಗಳು ಇರದಿರುವ ಬಗ್ಗೆ ಖಚಿತ ಪಡಿಸಿಕೊಂಡ ನಂತರವೇ ಮೆರವಣಿಗೆ ನಡೆಸಬೇಕು ಎಂದು ತಿಳಿಸಿದರು.

    ಕೊರೊನಾ ಸೋಂಕು ಪ್ರಕರಣಗಳು ಕಡಿಮೆ ಇದ್ದರೂ ಹಬ್ಬದ ಸಂದರ್ಭದಲ್ಲಿ ಎಚ್ಚರ ವಹಿಸಬೇಕು, ಪ್ಲಾಸ್ಟ್ರ್ ಆಫ್ ಪ್ಯಾರಿಸ್ ಸೇರಿದಂತೆ ಪರಿಸರಕ್ಕೆ ಹಾನಿಯಾಗುವಂತಹ ಪ್ರತಿಮೆಗಳನ್ನು ಬಳಸಬಾರದು, ಶುದ್ದ ಮಣ್ಣಿನಿಂದ ಮಾಡಿದ ಗಣಪನ್ನೇ ಬಳಸುವಂತೆ ತಿಳಿಸಿದ ಅವರು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸರ್ಕಾರ ಮತ್ತು ನ್ಯಾಯಾಲಯದ ಆದೇಶವನ್ನು ಪಾಲಿಸುವ ಮೂಲಕ ಯಶಸ್ವಿಯಾಗಿ ಗಣೇಶೋತ್ಸವವನ್ನು ಆಚರಿಸುವಂತೆ ಅವರು ಮಾಹಿತಿ ನೀಡಿದರು.

    ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅಂಕ್ಷು ಕುಮಾರ್ ಹಾಗೂ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು. ದ.ಕ.ಜಿಲ್ಲೆಯ ವಿವಿಧ ಗಣೇಶೋತ್ಸವ ಸಮಿತಿಯ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು ಹಾಗೂ ಆಯೋಜಕರು ಸಭೆಯಲ್ಲಿ ಭಾಗವಹಿಸಿ, ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು

    Navaloka media news
    Navaloka media news
    Share. Facebook Twitter Pinterest LinkedIn WhatsApp Reddit Tumblr Email
    admin
    • Website

    Related Posts

    Local News March 12, 2026

    ಸುಳ್ಯ: ಕುಸಿದು ಬಿದ್ದು ಉಪನ್ಯಾಸಕ ಸಾವು

    Local News March 11, 2026

    ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅತ್ತಾವರ 55ನೇ ವಾರ್ಡಿನ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆ

    Local News March 10, 2026

    ಉಪ್ಪಿನಂಗಡಿ : ಬೈಕ್‌ಗೆ ಕಾರು ಡಿಕ್ಕಿ – ಬೈಕ್ ಸವಾರ ಸಾವು

    Local News March 8, 2026

    ಕದ್ರಿ ಉತ್ತರ ವಾರ್ಡಿನಲ್ಲಿ ನಿರ್ಮಾಣಗೊಳ್ಳಲಿರುವ ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಶಿಲನ್ಯಾಸ

    Local News March 7, 2026

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಸಾವು

    Local News March 5, 2026

    ಮಂಗಳೂರು: 58ನೇ ಬೋಳಾರ ವಾರ್ಡಿನ ರಸ್ತೆಯು ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ

    Comments are closed.

    Demo
    Don't Miss
    State news March 13, 2026

    ಬೆಳ್ತಂಗಡಿ: ಶಿರಾಡಿ ಘಾಟ್ ನಲ್ಲಿ ಕೆಎಸ್ಆರ್ಟಿಸಿ ರಾಜಹಂಸ ಬಸ್-ಕಾರು ಮುಖಾಮುಖಿ ಡಿಕ್ಕಿ: ಮೂವರು ಸಾವು

    ಬೆಳ್ತಂಗಡಿ, ಮಾ. 13 : ಕೆಎಸ್‌ಆರ್‌ಟಿಸಿ ರಾಜಹಂಸ ಬಸ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಬೆಳ್ತಂಗಡಿಯ ಮೂವರು…

    ಸುಳ್ಯ: ಕುಸಿದು ಬಿದ್ದು ಉಪನ್ಯಾಸಕ ಸಾವು

    March 12, 2026

    ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅತ್ತಾವರ 55ನೇ ವಾರ್ಡಿನ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆ

    March 11, 2026

    ಉಪ್ಪಿನಂಗಡಿ : ಬೈಕ್‌ಗೆ ಕಾರು ಡಿಕ್ಕಿ – ಬೈಕ್ ಸವಾರ ಸಾವು

    March 10, 2026
    Stay In Touch
    • Facebook
    • Twitter
    • Pinterest
    • Instagram
    Facebook X (Twitter) Instagram Pinterest
    • Home
    • Local News
    • State News
    • National/International news
    • Film News
    • Contact Us
    © 2026 All Right Reserved. Designed by Blueline Computers.

    Type above and press Enter to search. Press Esc to cancel.