ಬಜ್ಪೆ, ಅ. 10 : ಮಹಿಳೆಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಕೊಳಂಬೆ ಗ್ರಾಮದ ಹೊಗೆಪದವಿನ ನಿವಾಸಿ ಶೋಭಾ (40) ಎಂದು ಗುರುತಿಸಲಾಗಿದೆ.
ಶೋಭಾ ಅವಿವಾಹಿತೆಯಾಗಿದ್ದು, ಇವರು ಪಕ್ಕದ ಮನೆಯ ತೋಟದಲ್ಲಿದ್ದ ಅವರಣವಿಲ್ಲದ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಶೋಭಾ ಅವರು ಭಾನುವಾರ ರಾತ್ರಿ ಊಟ ಮಾಡಿ ಮಲಗಿದ್ದರು. ಸೋಮವಾರ ಬೆಳಗ್ಗೆ ಮನೆಯಲ್ಲಿ ಇಲ್ಲದ ಕಾರಣ ಹುಡುಕಾಗಿದಾಗ ರಾಮಕೃಷ್ಣ ಭಟ್ ಅವರ ತೋಟದಲ್ಲಿರುವ ಬಾವಿಯಲ್ಲಿ ಶವ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.