ಮಂಗಳೂರು, ಅ. 06 : ಮಂಗಳೂರು ಮಹಾನಗರ ಪಾಲಿಕೆಯ ವಿಪಕ್ಷ ನಾಯಕರಾಗಿ ಪ್ರವೀಣ್ ಚಂದ್ರ ಆಳ್ವ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು.
ನಿಕಟಪೂರ್ವ ವಿಪಕ್ಷ ನಾಯಕ ನವೀನ್ ಡಿಸೋಜಾ ಅವರಿಂದ ಅಧಿಕಾರವನ್ನು ವಹಿಸಿಕೊಂಡ ಪ್ರವೀಣ್ ಚಂದ್ರ ಆಳ್ವ ಅವರನ್ನು ಮಾಜಿ ಶಾಸಕ ಜೆಆರ್ ಲೋಬೊ ಹಾಗೂ ಕಾಂಗ್ರೆಸ್ ಪಕ್ಷದ ಪಾಲಿಕೆಯ ಸದಸ್ಯರು ಕಾಂಗ್ರೆಸ್ ಮುಖಂಡರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾಜಿ ವಿಪಕ್ಷ ನಾಯಕ ವಿನಯ್ ರಾಜ್, ಕಾಂಗ್ರೆಸ್ ನಾಯಕ ಮಿಥುನ್ ರೈ, ರವೂಫ್, ಶಶಿಧರ ಹೆಗ್ಡೆ, ಕವಿತಾ ಸನಿಲ್, ಮನಪಾ ಸದಸ್ಯ ಅನಿಲ್ ಕುಮಾರ್,ಟಿ.ಕೆ ಸುಧೀರ್ ಪದ್ಮರಾಜ್, ವಿಶ್ವಾಸ ದಾಸ್, ಭಾಸ್ಕರ ಮೊಯಿಲಿ, ,ಶಾಲೆಟ್ ಪಿಂಟೋ,ಮಮತಾಗಟ್ಟಿ, ಮುತ್ತಿತರ ನಾಯಕರು ಉಪಸ್ಥಿತರಿದ್ದರು.