ಮಂಗಳೂರು, ಅ. 11: ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಶನ್ ಮಂಗಳಾದೇವಿ ವಲಯ ವತಿಯಿಂದ ಸಿಎಸ್ಐ ಕಾಂತಿ ಚರ್ಚ್ ಜಪ್ಪುವಿನಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಆ, 11 ರವಿವಾರ ಜರಗಿತು.
ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಮಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಸಚೇತಕರಾದ ಪ್ರೇಮಾನಂದ ಶೆಟ್ಟಿ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿಅಧ್ಯಾಪಕರು ಮತ್ತು ನಿರೂಪಕರು ಮಂಜುಳಾ ಶೆಟ್ಟಿ ಅವರು ಆಟಿ ತಿಂಗಳ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು. ಸಮಾರಂಭದಲ್ಲಿ ತಣ್ಣೀರುಬಾವಿ, ನಂದಿಗುಡ್ಡೆ ರುದ್ರಭೂಮಿ ಸೇವಕರು ಆನಂದ್ ಗಿರಿ ಅವರನ್ನು ಸನ್ಮಾನಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಟೈಲರ್ ಅಸೋಸಿಯೇಶನ್ ಮಂಗಳಾದೇವಿ ವಲಯ ಉಪಾಧ್ಯಕ್ತರು ಅನಂತರಾಮ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಸಿಎಸ್ಐ ಕಾಂತಿ ಚರ್ಚ್ನ ವಂ| ಗ್ಯಾಬ್ರಿಯಲ್ ರೋನಿತ್ ಸಾಮುವೇಲ್ ,ಅಸೋಸಿಯೇಶನ್ ರಾಜ್ಯಾಧ್ಯಕ್ಷ ನಾರಾಯಣ ಬಿ.ಎ., ಟೈಲರ್ ಅಸೋಸಿಯೇಶನ್ ಮಂಗಳೂರು ಇದರ ಕ್ಷೇತ್ರ ಸಮಿತಿ ಅಧ್ಯಕ್ಷ ಹರೀಶ್ ರೈ , ವಿದ್ಯಾ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.