ಮಂಗಳೂರು,ಜು.16 :‘ಸಾಂಕೇತ್’ ಕನ್ನಡ ಸಿನೆಮಾ ಜು.26ರಂದು ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ಸೋಮವಾರ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಿನೆಮಾದ ನಿರ್ದೇಶಕಿ ಜೋತ್ಸ್ನಾ ಕೆ.ರಾಜ್ ಹೇಳಿದರು.ಸಾಂಕೇತ್ ಸಿನೆಮಾವು ಒಬ್ಬ ವ್ಯಕ್ತಿಯ ಮದುವೆ-ಮಕ್ಕಳ ವಿಷಯದ ತೊಳಲಾಟವನ್ನು ಬಿಂಬಿಸುವ ವಿಭಿನ್ನ ಕಥೆಯನ್ನೊಳಗೊಂಡಿದೆ ಎಂದು ಸಿನೆಮಾದ ನಿರ್ದೇಶಕಿ ಜೋತ್ಸ್ನಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಟಿ ಚೈತ್ರಾ ಶೆಟ್ಟಿ ಮಾತನಾಡಿ, ಸ್ವತಃ ಸಂಪಾದನೆ, ಧ್ವನಿ ವಿನ್ಯಾಸ ಹಾಗೂ ನಿರ್ದೇಶನವನ್ನು ಜೋತ್ಸ್ನಾ ನಿಭಾಯಿಸಿದ್ದಾರೆ. ಎಕ್ಕಿ ರಾವ್, ಮೋಹಣ್ ಶೇಣಿ, ರಾಹುಲ್ ಅಮೀನ್, ರೂಪಶ್ರೀ ವರ್ಕಾಡಿ, ನಿರೀಕ್ಷಾ ಶೆಟ್ಟಿ ಸದಾಶಿವ ಅಮೀನ್, ರಜೀತ್ ಕದ್ರಿ, ನಿರೀಕ್ಷಾ ರಾಣಿ, ಮೇಘನಾ ರಕ್ಷಿತಾ ಮುಂತಾದವರು ಅಭಿನಯಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ವಿಕ್ಕಿ ರಾವ್, ರಾಹುಲ್ ಅಮೀನ್, ಸನತ್ ಕುಮಾರ್, ಪ್ರಕಾಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು.