ಪುತ್ತೂರು, ಫೆ 06 : ನವವಿವಾಹಿತೆಯೊಬ್ಬರು ನೇಣು ಬಿಗಿದು ಆತ್ಯಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಕುರಿಯ ಗಡಾಜೆ ಎಂಬಲ್ಲಿ ನಡೆದಿದೆ.
ಮೃತರನ್ನು ಸಾಂತ್ಯ ನಿವಾಸಿ ಜಯಪ್ರಕಾಶ್ ಎಂಬವರ ಪತ್ನಿ ವೈಶಾಲಿ (26) ಎಂದು ಗುರುತಿಸಲಾಗಿದೆ.
ಜಯಪ್ರಕಾಶ್ ಹಾಗೂ ವೈಶಾಲಿ ಮದುವೆ 7 ತಿಂಗಳ ಹಿಂದೆ ನಡೆದಿತ್ತು.ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.