ಬಂಟ್ವಾಳ, ಏ. 19 : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವಿವಿಧೆಡೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರು ಬಿರುಸಿನ ಪ್ರಚಾರ ಕಾರ್ಯ ನಡೆಸಿದರು. ಏ. 18 ರಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಂಗಡಿ – ಮಳಿಗೆ, ಮನೆಗಳಿಗೆ ತೆರಳಿ ಮತ ಯಾಚನೆ ನಡೆಸಿದರು
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅಭ್ಯರ್ಥಿ ತಮ್ಮ ಊರಿಗೆ ಬರುತ್ತಿದ್ದಂತೆ ಕಾರ್ಯಕರ್ತರು ಹೂ ಮಾಲೆ ಹಾಕಿ, ಶಾಲು ಹೊದಿಸಿ, ಬರಮಾಡಿಕೊಂಡರು. ಅಭ್ಯರ್ಥಿಗೆ ಪದ್ಮರಾಜ್ ಆರ್. ಪೂಜಾರಿ ಅವರು ಮತ ಯಾಚನೆ ಮಾಡುವಾಗ ಅವರ ಜೊತೆ ತೆರಳಿ, ಅಭ್ಯರ್ಥಿ ಗೆ ಸಾಥ್ ನೀಡಿದರು.
ಬಡಗ ಬೆಳ್ಳೂರು, ಅಮ್ಮುಂಜೆ – ಬಡಕಬೈಲು ಜಂಕ್ಷನ್, ಕಳ್ಳಿಗೆ – ಬ್ರಹ್ಮರಕೊಟ್ಲು, ಶೇಡಿಗುರಿ, ಬಾಳ್ತಿಲ, ಸೂರಿಕುಮೇರು, ಮಾಣಿ, ಬುಡೋಳಿ, ಕಲ್ಲಡ್ಕ, ಅಮ್ಟೂರು, ಬೊಳ್ಳಾಯಿ, ಮಿತನಡ್ಕ, ಕನ್ಯಾನ, ಕೊಡುಂಗಾಯಿ, ಸಾಲೆತ್ತೂರು, ಬೋಳಂತೂರು, ಸಜೀಪ ಮುನ್ನೂರು – ನಂದಾವರ ಜಂಕ್ಷನ್ ವಿವಿಧೆಡೆಗಳಿಗೆ ಇನ್ನಿತರ ಕಡೆಗಳಿಗೆ ತೆರಳಿ ಕಾರ್ಯ ಮತ ಯಾಚನೆ ಮಾಡಿದರು.