ಮಂಗಳೂರು,ಆ.13 : ತುಳು ರಂಗಭೂಮಿ ನಟ ಅಶೋಕ್ ಶೆಟ್ಟಿ ಅಂಗ್ಲಮೊಗರು ಆ. 12, ಸೋಮವಾರ ನಿಧನರಾದರು. ಅವರಿಗೆ 53ವರ್ಷ ವಯಸ್ಸಾಗಿತ್ತು.
ಅಂಬ್ಲಮೊಗರುವಿನ ಮನೆಯಲ್ಲಿ ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾರೆ. ವೃತ್ತಿಪರ ಕಲಾವಿದರಾದ ಅಶೋಕ್ ಇವರು ವಿಜಯ ಕುಮಾರ್ ಕೊಡಿಯಾಲ್ ಬೈಲ್ ಸಾರಥ್ಯದ ಕಲಾಸಂಗಮ ನಾಟಕ ತಂಡದಲ್ಲಿ ಸುದೀರ್ಘ ಕಾಲ ಕಲಾ ಸೇವೆ ಸಲ್ಲಿಸಿದ್ದರು. ಇವರು ಒರಿಯರ್ದೊರಿ ಅಸಲ್ ತುಳು ಸಿನಿಮಾದಲ್ಲಿ ನಿರ್ವಹಿಸಿದ ತೆಂಗಿನ ಕಾಯಿ ಕೀಳುವ ನಾಥುವಿನ ಪಾತ್ರ ಜನಮನ್ನಣೆ ಗಳಿಸಿತ್ತು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು, ಮಿತ್ರರನ್ನು ಅಗಲಿದ್ದಾರೆ.